ಬುಲಂದ್ ಶಹರ್ ಹಿಂಸಾಚಾರ 
ದೇಶ

ಬುಲಂದ್ ಶಹರ್ ಹಿಂಸಾಚಾರ: ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಯತ್ನವಾಗಿತ್ತು- ಎನ್ ಸಿಹೆಚ್ಆರ್ ಒ!

ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿ ಹಾಗೂ 20 ವರ್ಷದ ಯುವಕನ ಹತ್ಯೆಗೆ ಕಾರಣವಾಗಿದ್ದ ಬುಲಂದ್ ಶಹರ್ ನ ಹಿಂಸಾಚಾರದ ಬಗ್ಗೆ ಮಾನವ ಹಕ್ಕುಗಳ ಆಯೋಗ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ನವದೆಹಲಿ: ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿ ಹಾಗೂ 20 ವರ್ಷದ ಯುವಕನ ಹತ್ಯೆಗೆ ಕಾರಣವಾಗಿದ್ದ ಬುಲಂದ್ ಶಹರ್ ನ ಹಿಂಸಾಚಾರದ ಬಗ್ಗೆ ಮಾನವ ಹಕ್ಕುಗಳ ಆಯೋಗ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ಮಿಜೋರಾಮ್, ತೆಲಂಗಾಣದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಬುಲಂದ್ ಶಹರ್ ನ ಚಿಂಗ್ರಾವತಿ ಗ್ರಾಮದ ಹೊರಬ್ಭಾಗದಲ್ಲಿ ದನದ ಮೃತ ದೇಹ ಪತ್ತೆಯಾದ ನಂತರ ಡಿ.3 ರಂದು ಉಂಟಾದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹಾಗೂ ನಾಗರಿಕ ಸುಮಿತ್ ಕುಮಾರ್ ಮೃತಪಟ್ಟಿದ್ದರು. 
ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಮತಧೃವೀಕರಣಕ್ಕಾಗಿ ಹಿಂದುತ್ವವಾದಿ ಶಕ್ತಿಗಳು ಈ ಘಟನೆಯನ್ನು ಯೋಜಿಸಿದ್ದವು ಎಂದು ಬುಲಂದ್ ಶಹರ್ ಗೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಆಯೋಗದ ಸಹ ಸಂಸ್ಥೆಯಾಗಿರುವ ಮಾನವ ಹಕ್ಕುಗಳ ಸಂಘಟನೆಯ ರಾಷ್ಟ್ರೀಯ ಒಕ್ಕೂಟ(ಎನ್ ಸಿ ಹೆಚ್ ಆರ್ ಒ) ವರದಿ ಹೇಳಿದೆ. 
ಇದೇ ವೇಳೆ ಗೋ ರಕ್ಷಣೆಯ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಿರುಗುವ ಎಲ್ಲಾ ಸಂಘಟನೆಗಳನ್ನೂ ನಿಷೇಧಿಸಬೇಕೆಂದು ಎನ್ ಸಿಹೆಚ್ ಆರ್ ಒ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ. 
ಎನ್ ಸಿಹೆಚ್ ಆರ್ ಒ ಸದಸ್ಯರು ಬುಲಂದ್ ಶಹರ್ ಗೆ ಭೇಟಿ ನೀಡಿ ಅಲ್ಲಿನ ವಾಸ್ತವಗಳನ್ನು ಪರಿಶೀಲಿಸಲಾಗಿದ್ದ ವರದಿಯ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿದ್ದು, ಬುಲಂದ್ ಶಹರ್ ಹಿಂಸಾಚಾರ, ಗೋವಿನ ಹೆಸರಿನಲ್ಲಿ ಆ ಪ್ರದೇಶದಲ್ಲಿ ಹಾಗೂ ಉಳಿದ ಪ್ರದೇಶಗಳಲ್ಲಿ ಅಸ್ಥಿರತೆ ಉಂಟುಮಾಡಲು ಭಜರಂಗದಳ ಹಾಗೂ ಬಿಜೆಪಿ ಯುವಮೋರ್ಚಾ  ಯೋಜಿಸಲಾದ ಕೃತ್ಯವಾಗಿತ್ತು ಎಂದು ಹೇಳಿದ್ದಾರೆ. 
ಭಜರಂಗದಳ ಹಾಗೂ ಬಿಜೆಪಿ ಯುವ ಮೋರ್ಚಾದ ನಾಯಕರಾದ ಯೋಗೇಶ್ ರಾಜ್ ಹಾಗೂ ಶಿಖರ್ ಅಗರ್ವಾಲ್ ಅವರ ಉತ್ತೇಜನದಿಂದ ಬಂದಿದ್ದ ಗುಂಪು ಚಿಂಗ್ರಾವತಿ ಪೊಲೀಸ್ ಠಾಣೆಯ ಪೋಸ್ಟ್ ಬಳಿ ಜಮಾವಣೆ ಆಗಿ ಹಲವು ವಾಹನಗಳನ್ನು ಸುಟ್ಟು ಹಾಕಿದ್ದವು , ಅಷ್ಟೇ ಅಲ್ಲದೇ ಪೊಲೀಸ್ ಪಡೆ ಮೇಲೆ ಗುಂಡು ಹಾರಿಸಿ ಕಲ್ಲು ತೂರಾಟ ನಡೆಸಿದ್ದವು ಎಂದು ಎನ್ ಸಿ ಹೆಚ್ ಆರ್ ಒ ಹೇಳಿಕೆ ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT