ದೇಶ

ಛಾಪಾ ಕಾಗದ ಹಗರಣ: ಮೃತಪಟ್ಟ ವರ್ಷದ ಬಳಿಕ ತೆಲಗಿ ಖುಲಾಸೆ

Raghavendra Adiga
ನಾಸಿಕ್: ಛಾಪಾ ಕಾಗದ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಬ್ದುಲ್ ಕರೀಂ ತೆಲಗಿ ಹಾಗೂ ಇತರರನ್ನು ಖುಲಾಸೆಗೊಳಿಸಿ ಮಹಾರಾಷ್ಟ್ರದ ನಾಸಿಕ್ ವಿಶೇಷ ನ್ಯಾಯಾಲಯ ಆದೇಶಿಸಿದೆ. 
ತೆಲಗಿ ನಿಧನರಾಗಿ ಒಂದು ವರ್ಷದ ಬಳಿಕ ನ್ಯಾಯಾಲಯ ಪ್ರಕರಣದ ತೀರ್ಪು ನೀಡಿದ್ದು ಅವರ ಮೇಲಿನ ಆರೋಪಗಳನು ತೆಗೆದು ಹಾಕಿದ್ದಲ್ಲದೆ ಇತರೇ ಆರೋಪಿಗಳನ್ನು ಸಹ ಖುಲಾಸೆಗೊಳಿಸಲಾಗಿದೆ.
ಕರ್ನಾಟಕ ಸೇರಿ ದೇಶಾದ್ಯಂತ ಸದ್ದು ಮಾಡಿದ್ದ ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ 2006ರ ಜನವರಿ 17ರಂದು 30 ವರ್ಷ ಕಠಿಣ ಜೈಲು ಶಿಕ್ಷೆ ಲಭಿಸಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ತೆಲಗಿಗೆ 2007ರ ಜೂನ್ 28ರಂದು 13 ವರ್ಷ ಶಿಕ್ಷೆಯಾಗಿತ್ತು.
ತೆಲಗಿ 26.ಅಕ್ಟೋಬರ್.2017ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
SCROLL FOR NEXT