ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಸಾಜ್ ಮಾಡಿಸಿಕೊಳ್ಳಲು ಬಂದ ವಿದೇಶಿ ಮಹಿಳೆ ಮೇಲೆ ನೌಕರನ ಅತ್ಯಾಚಾರ!

ಮಸಾಜ್ ಮಾಡಿಸಿಕೊಳ್ಳಲು ಬಂದಿದ್ದ 54 ವರ್ಷದ ವಿದೇಶಿ ಮಹಿಳೆಯನ್ನು ಯುವಕ ಅತ್ಯಾಚರಿಸಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

ಸಂಗ್ರಹ ಚಿತ್ರ
Vishwanath S
Updated On : 31 Dec 2018, 7:25 am
ಚಂಢೀಗಡ್: ಮಸಾಜ್ ಮಾಡಿಸಿಕೊಳ್ಳಲು ಬಂದಿದ್ದ 54 ವರ್ಷದ ವಿದೇಶಿ ಮಹಿಳೆಯನ್ನು ಯುವಕ ಅತ್ಯಾಚರಿಸಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಪಾದದ ಮಸಾಜ್ ಮಾಡಿಸಿಕೊಳ್ಳುವಾಗ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತ ಮಹಿಳೆ ಡಿಸೆಂಬರ್ 27ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಸದ್ಯ ಆರೋಪ ತಲೆ ಮರೆಸಿಕೊಂಡಿದ್ದು ಆತ ಉತ್ತರ ಪ್ರದೇಶಧ ಬಿಜ್ನೋರ್ ನಿವಾಸಿ ಅಂತ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಡಿಸೆಂಬರ್ 19ರಂದು ವಿದೇಶಿ ಮಹಿಳೆ ತನ್ನ ಪಾಟ್ನರ್ ಜತೆ ಚಂಡೀಗಢಕ್ಕೆ ಬಂದಿದ್ದರು. ಬಳಿಕ ಚಂಡೀಗಢದ ಐಟಿ ಪಾರ್ಕ್ ನ ಸ್ಟಾರ್ ಹೊಟೇಲ್ ನಲ್ಲಿ ತಂಗಿದ್ದು ಅಲ್ಲಿನ ಸ್ಪಾದಲ್ಲಿ ಮಸಾಜ್ ಗೆಂದು ಹೋಗಿದ್ದಾಗ ಆರೋಪಿ ಅಸಭ್ಯವಾಗಿ ಮುಟ್ಟಿ, ನನ್ನ ಜೊತೆ ಕೆಟ್ಟದಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

Advertisement

Advertisement

ಭಾರತೀಯ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಸಲುವಾಗಿ ವಿದೇಶಿ ಮಹಿಳೆ ಚಂಡೀಗಢಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement