ನವದೆಹಲಿ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಗೋ ರಕ್ಷಣಾ ಮಸೂದೆ-2017 ಅನ್ನು (ಇದು ಸದಸ್ಯರ ಖಾಸಗಿ ಮಸೂದೆ) ಮಂಡಿಸಿದ್ದು, ಗೋ ಹಂತಕರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಮಸೂದೆಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಮೊಗಲ್ ಸಾಮ್ರಾಜ್ಯದಲ್ಲಿ ಬಹದ್ದೂರ್ ಷಾ ಗೋ ಹತ್ಯೆಯನ್ನು ನಿಷೇಧಿಸಿದ್ದರು ಎಂದು ಉದಾಹರಣೆ ನೀಡಿದರು. ನಮ್ಮ ದೇಶದಲ್ಲಿ ಬ್ರಿಟಿಷರು ಗೋ ಹತ್ಯೆಯನ್ನು ಒಂದು ಫ್ಯಾಶನ್ ಎಂಬಂತೆ ಮಾಡಿದರು. ಆಧುನಿಕ ವಿಜ್ಞಾನದ ಪ್ರಕಾರ, ಗೋವಿನಿಂದ ಹಲವು ವೈಜ್ಞಾನಿಕ ಉಪಯೋಗಗಳಿವೆ. ಗೋ ಮೂತ್ರದಿಂದ ಅಲೋಪಥಿ ಮೆಡಿಸಿನ್ಸ್ ತಯಾರಿಸಲಾಗುತ್ತಿದೆ. ಇಂತಹ ಗೋವನ್ನು ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡುವ ಅಗತ್ಯ ಇದೆ ಎಂದರು.
ಗೋ ರಕ್ಷಣೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಕೇಂದ್ರ ಸರಕಾರ ಇನ್ನಿತರ ಕಾರ್ಯಗಳಲ್ಲಿ ನಿರತವಾಗಿದೆ. ಗೋ ರಕ್ಷಣೆ ಮಸೂದೆಯನ್ನು ಜಾರಿಗೆ ತರುವುದು ಬಿಜೆಪಿ ಸಂಸದನಾಗಿ ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics