ದೇಶ

22 ನಾವಿಕರಿದ್ದ ಗ್ಯಾಸೋಲಿನ್ ಹಡಗು ಆಫ್ರಿಕಾದಲ್ಲಿ ನಾಪತ್ತೆ

Nagaraja AB

ಕಾಸರಗೊಡು :ಇಬ್ಬರು ಕೇರಳದವರು ಸೇರಿದಂತೆ 22 ಭಾರತೀಯ ನಾವಿಕರಿದ್ದ  ಅನಿಲ ಸಾಗಿಸುತ್ತಿದ್ದ ಹಡಗೊಂದು  ಪಶ್ಚಿಮ ಆಫ್ರಿಕಾ ದೇಶದಿಂದ ನಾಪತ್ತೆಯಾಗಿದೆ.

ಎಂ. ಟಿ. ಮ್ಯಾರಿನ್ ಎಕ್ಸ್ ಪ್ರೆಸ್ ಹಡಗು ಪಶ್ಚಿಮ ಆಫ್ರಿಕಾದ ಬೆನಿನ್ ತೀರ ಪ್ರದೇಶದಿಂದ ನಾಪತ್ತೆಯಾಗಿದೆ .ಈ  ಹಡಗಿನಲ್ಲಿ  13. 500 ಟನ್  ಅನಿಲ ಸಾಗಿಸಲಾಗುತ್ತಿತ್ತು,ಕಡಲ್ಗಳ್ಳರಿಂದ ಹಡಗು ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ.

 ಮುಂಬೈ ಮೂಲದ ಆಂಗ್ಲೋ -ಇಸ್ಟ್ರನ್ ಹಡಗು ನಿರ್ವಹಣೆಗೆ ಸೇರಿದ ಈ ಹಡಗು ಇದಾಗಿದ್ದು, ಜ.31ರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹಡಗಿನಲ್ಲಿದ್ದ ನಾವಿಕರೊಬ್ಬರ ಸಂಬಂಧಿ ತಿಳಿಸಿದ್ದಾರೆ.

ಪನಾಮಾ ನೋಂದಣಿಯ ಹಡಗುವೊಂದು ಬೆನಾನಿಯಲ್ಲಿ ಜನವರಿ 31ರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ದೊರೆತಿದ್ದು, ಉಪಗ್ರಹಗಳ ಸಹಾಯದಿಂದ ಆ ಹಡಗು ಪತ್ತೆ ಹಚ್ಚುವ ಕಾರ್ಯ ಸಾಗಿದೆ ಎಂದು ಅಬುಜಾದ   ರಾಯಬಾರಿ ಅಧಿಕಾರಿ ಅವುಂಗಾ ಶಾತ್ ಸಾಂಗ್ ಪ್ರೇಮ್ ರಾಮ್ ಯೋ ತಿಳಿಸಿದ್ದಾರೆ.

  ಈ ಹಡಗಿನಲ್ಲಿ ಸುಮಾರು 52 ಕೋಟಿ ಮೌಲ್ಯದ ಸರಕನ್ನು ಸಾಗಿಸಲಾಗುತಿತ್ತು ಎಂಬ ಮಾಹಿತಿಯೂ ತಿಳಿದುಬಂದಿದೆ.


SCROLL FOR NEXT