ರಾಮೇಶ್ವರಂ: ಮಾದಕ ದ್ರವ್ಯ ಹೆರಾಯಿನ್ ನ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಇಬ್ಬರು ಭಾರತೀಯರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಬಂಧಿತ ಆರೋಪಿಗಳು ಒಂದು ಕೋಟಿ ಮೌಲ್ಯದ 425 ಗ್ರಾಂ ಹೆರಾಯಿನ್ ಸಾಗಾಟ ನಡೆಸಿದ್ದರು.
ಶ್ರೀಲಂಕಾ ನೌಕಾ ಸಿಬ್ಬಂದಿಗಳ ತಂಡವು ಧನುಷ್ಕೋಡಿಯ ಮನ್ನಾರ್ ವಲಯದ ತಮ್ಮ ವ್ಯಾಪ್ತಿಯ ಸಮುದ್ರದಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ್ದು 425 ಗ್ರಾಂ ಹೆರಾಯಿನ್ ಮತ್ತು ತಂಬಾಕು ಉತ್ಪನ್ನಗಳನ್ನು (ಬೀಡಿ) ವಶಪಡಿಸಿಕೊಂಡಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ತಲೈಮನ್ನಾರ್ ಗೆ ಕರೆದೊಯ್ಯಲಾಗಿದ್ದು ಅವರೊಡನೆ ಅವರು ಬಳಸುತ್ತಿದ್ದ ದೋಣಿಯನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.