ದೇಶ

2017ರಲ್ಲಿ 7 ಸಾವಿರ ಭಾರತೀಯರು, 10 ಸಾವಿರ ಚೀನೀಯರು ವಿದೇಶಗಳಿಗೆ ವಲಸೆ

Sumana Upadhyaya
ನವದೆಹಲಿ: ಚೀನಾ ದೇಶದ ನಂತರ ಭಾರತ ದೇಶ ಅತಿ ಶ್ರೀಮಂತರ ವಲಸೆ ಹೋಗುವಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, 2017ರಲ್ಲಿ 7,000 ಅತಿ ಹೆಚ್ಚು ಶ್ರೀಮಂತರು ತಮ್ಮ ವಾಸಸ್ಥಾನವನ್ನು ಬದಲಾಯಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇಕಡಾ 16ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಹೇಳುತ್ತದೆ.
ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ, 7,000 ಅತಿ ಶ್ರೀಮಂತ ಭಾರತೀಯರು ಸಾಗರೋತ್ತರವಾಗಿ 2017ರಲ್ಲಿ ವಾಸಸ್ಥಾನವನ್ನು ಬದಲಾಯಿಸಿದ್ದಾರೆ. 2016ರಲ್ಲಿ ಈ ಸಂಖ್ಯೆ 6,000ದಷ್ಟಿತ್ತು. 2015ರಲ್ಲಿ 4,000 ಲಕ್ಷಾಧೀಶರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ.
ಜಾಗತಿಕವಾಗಿ, 10,000 ಶ್ರೀಮಂತ ಚೀನೀಯರು 2017ರಲ್ಲಿ ತಮ್ಮ ವಾಸಸ್ಥಾನಗಳನ್ನು ಬೇರೆ ದೇಶಗಳಿಗೆ ಬದಲಾಯಿಸಿಕೊಂಡಿದ್ದಾರೆ. ಟರ್ಕಿ ದೇಶದಿಂದ 6,000 ಶ್ರೀಮಂತರು, ಇಂಗ್ಲೆಂಡ್ ನಿಂದ 4,000, ಫ್ರಾನ್ಸ್ ನಿಂದ 4,000 ಮತ್ತು ರಷ್ಯಾ ಫೆಡರೇಶನ್ ನಿಂದ 3,000 ಶ್ರೀಮಂತರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ.
ವಲಸೆಯ ಟ್ರೆಂಡ್ ನೋಡಿದರೆ ಭಾರತದ ಅತಿ ಶ್ರೀಮಂತರಲ್ಲಿ ಬಹುತೇಕರು ಅಮೆರಿಕಾ, ಯುಎಇ,ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗಳಿಗೆ, ಚೀನೀಯರಲ್ಲಿ ಬಹುತೇಕರು ಅಮೆರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾಗಳಿಗೆ ವಲಸೆ ಹೋಗುತ್ತಾರೆ.
SCROLL FOR NEXT