ದೇಶ

2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರಕ್ಕೆ ಕೀಳುಮಟ್ಟದ ಪ್ರಚಾರದ ಗೀಳು: ಕಾಂಗ್ರೆಸ್

Nagaraja AB

ನವದೆಹಲಿ:  2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೀಳುಮಟ್ಟದ ಪ್ರಚಾರದ ಗೀಳಿಗೆ ಗಂಟುಬಿದ್ದಿರುವ ಕೇಂದ್ರಸರ್ಕಾರ ಬೋಪೋರ್ಸ್ ಹಗರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು  ಸುಪ್ರೀಂಕೋರ್ಟಿಗೆ ಸಲ್ಲಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಪ್ರಕರಣ ಸಂಬಂಧ 2005ರಲ್ಲಿ ದೆಹಲಿ  ಹೈಕೋರ್ಟ್  ಎಲ್ಲಾ ಆರೋಪಿಗಳ ಮೇಲಿನ ಪ್ರಕರಣಗಳನ್ನೂ ರದ್ದುಗೊಳಿಸಿದ್ದರೂ ಸಿಬಿಐ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ. ಇದೊಂದು ಕೀಳುಮಟ್ಟದ ಪ್ರಚಾರ ಪಡೆಯುವ ತಂತ್ರವಾಗಿದೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಅಜಾದ್ ಹೇಳಿದ್ದಾರೆ.

ಸಿಬಿಐ, ಇಡಿ ಮೊದಲಾದ ಸರ್ಕಾರದ ಯಂತ್ರಗಳನ್ನು ಬಳಸಿಕೊಳ್ಳುವ ಮೂಲಕ ಪ್ರತಿಪಕ್ಷಗಳ ನಾಯಕರನ್ನು ಹಣಿಯಲು ಯತ್ನಿಸಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ  ಬಗ್ಗುವುದಿಲ್ಲ. ಬಿಜೆಪಿ ವಿರುದ್ಧ ದಕ್ಷತೆಯೊಂದಿಗೆ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.

ಬೋಪೋರ್ಸ್ ಹಗರಣದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಬಿಜೆಪಿ ತಳಕು ಹಾಕುತ್ತಿದೆ, ಆದರೆ,ಅದರಲ್ಲಿ ಸಫಲವಾಗದು ಎಂದು ಗುಲಾಮ್ ನಬಿ ಅಜಾದ್ ಹೇಳಿದ್ದಾರೆ.

ಶಸ್ತ್ರಸ್ತ್ರ ಉತ್ಪಾದನೆ ಸಂಬಂಧ ಭಾರತ ಮತ್ತು ಸ್ವಿಡನ್ ದೇಶದ ಎಬಿ ಬೋಪೋರ್ಸ್ ಕಂಪನಿ ನಡುವೆ ಮಾರ್ಚ್ 24 .1986ರಲ್ಲಿ ಒಪ್ಪಂದವಾಗಿತ್ತು.    ಭಾರತದ ರಾಜಕಾರಣಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಕಂಪನಿ ಲಂಚ ನೀಡಿದೆ ಎಂದು 1987ರಲ್ಲಿ ಸ್ವೀಡನ್ ರೇಡಿಯೋ ಆರೋಪಿಸಿತ್ತು.

 

SCROLL FOR NEXT