ದೇಶ

ಗ್ಯಾಸೋಲಿನ್ ಹಡಗು ನಾಪತ್ತೆ: ನೈಜೀರಿಯಾ ಅಧಿಕಾರಿಗಳೊಡನೆ ವಿದೇಶಾಂಗ ಸಚಿವಾಲಯ ಸಂಪರ್ಕ

Raghavendra Adiga
ನವದೆಹಲಿ: 22 ಭಾರತೀಯ ನಾವಿಕರಿದ್ದ ಹಡಗು ಕಾಣೆಯಾದ ಪ್ರಸಂಗಕ್ಕೆ ಸಂಬಂಧಿಸಿ ನೈಜೀರಿಯಾ ಮತ್ತು ಬೆನಿನ್ ರಾಷ್ಟ್ರಗಳ ಅಧಿಕಾರಿಗಳ ಜೊತೆ ಭಾರತೀಯ ಅಧಿಕಾರಿ ವರ್ಗ ಸತತ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಂಬೈ ಮೂಲದ ಆಂಗ್ಲೋ-ಈಸ್ಟರ್ನ್ ಷಿಪ್ಪಿಂಗ್ ಸಂಸ್ಥೆ ಒಡೆತ ಮೆರೈನ್ ಎಕ್ಸ್ ಪ್ರೆಸ್ ವ್ಯಾಪಾರಿ ಹಡಗಿನ (ತೈಲ ಟ್ಯಾಂಕರ್) ಇಂದು ಬೆಮಿನ್ ದೇಶದ ಕರಾವಳಿಯಿಂದ ಕಾಣೆಯಾಗಿದ್ದು ಅದರಲ್ಲಿ 22 ಭಾರತೀಯ ನಾವಿಕರಿದ್ದರು.ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ರವಿಶ್ ಕುಮಾರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಭಾರತೀಯ ಕಾಋಯನಿರತ ಅಧಿಕಾರಿಗಳ ತಂಡ ನೈಜೀರಿಯಾ ತಂಡದೊಡನೆ ಸತತ ಸಂಪರ್ಕದಲ್ಲಿದೆ. ಹಡಗಿನ ಪತ್ತೆ ಕಾರ್ಯಾಚರಣೆ ಸಂಬಂಧ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ತಿಳಿಸಿದೆ. "ನೈಜೀರಿಯಾದಲ್ಲಿರುವ ನಮ್ಮ ತಂಡ ನೈಜೀರಿಯಾ ಹಾಗೂ ಬೆಮಿನ್ ಅಧಿಕಾರಿಗಳೊಡನೆ ಸಂಪರ್ಕದಲ್ಲಿದೆ. ಹಡಗು ಪತ್ತೆ ಹಚ್ಚುವ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುವಲ್ಲಿ ಸಹಕಾರ ನಿಡುತ್ತಿದೆ. ಕಾಣೆಯಾದವರ ಬಗ್ಗೆ ಮಾಹಿತಿಗಾಗಿ ರಾಯಭಾರಿ ಕಛೇರಿಯು 24-ಗಂಟೆಯ ಸಹಾಯವಾಣಿ ಸ್ಥಾಪಿಸಿದ್ದು ಸಹಾಯವಾಣಿ ಹೀಗಿದೆ- ಸಂಖ್ಯೆ + 234-9070343860," ರವೀಶ್ ಕುಮಾರ್ ಟ್ವೀಟ್ ಮೂಲಕ ಹೇಳಿದ್ದಾರೆ.
SCROLL FOR NEXT