ಪ್ರತ್ಯೇಕತಾವಾದಿ ನಾಯಕ ಮಿರ್ವಾಜಾ ಉಮರ್ ಫಾರೂಕ್
ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿಗಳ ರಕ್ಷಣೆಗೆ ಕಳೆದ 10 ವರ್ಷಗಳಲ್ಲಿ 15 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರ ಅಲ್ಲಿನ ವಿಧಾನಸಭೆಗೆ ತಿಳಿಸಿದೆ.
ಮಿರ್ವಾಜಾ ಉಮರ್ ಫಾರೂಕ್ ಸೇರಿದಂತೆ ಪ್ರಮುಖ ಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ 6 ಕೋಟಿ ರೂಪಾಯಿ ಖರ್ಚು ಸೇರಿದಂತೆ 10 ವರ್ಷಗಳಲ್ಲಿ ಒಟ್ಟು 15 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಶಾಸಕ ಪವನ್ ಗುಪ್ತ ಅವರು ಕೇಳಿದ ಪ್ರಶ್ನೆಗೆ ಜಮ್ಮು-ಕಾಶ್ಮೀರ ಸರ್ಕಾರ ಉತ್ತರ ನೀಡಿದೆ.
ಮಿರ್ವಾಜಾ ಉಮಮ್ರ್ ಫಾರೂಕ್ ಗೆ ಕಳೆದ 10 ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ, ಪಿಎಸ್ಒ (ಪರ್ಸನಲ್ ಸೆಕ್ಯುರಿಟಿ ಆಫೀಸರ್) ಗಳು ಸೇರಿದಂತೆ ಪ್ರತ್ಯೇಕತಾವಾದಿಗಳ ಪೊಲೀಸ್ ಭದ್ರತೆಗಾಗಿಯೇ 1.27 ಕೋಟಿ ಖರ್ಚಾಗಿದೆ. ಇನ್ನು ಮತ್ತೋರ್ವ ಪ್ರತ್ಯೇಕತಾವಾದಿ ನಾಯಕ ಮೌಲ್ವಿ ಅಬ್ಬಾಸ್ ಅನ್ಸಾರಿಯ ಭದ್ರತಾ ಸಿಬ್ಬಂದಿಗಳು ಹಾಗೂ ಪಿಎಸ್ಒ ಗಾಗಿ 3.09 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇನ್ನು ಆಗಾಗ್ಗೇ ಬಂಧನಕ್ಕೊಳಗಾಗುವ ಯಾಸೀನ್ ಮಲ್ಲೀಕ್ ನ ಭದ್ರತೆಗಾಗಿಯೂ ಸರ್ಕಾರ 2391.48 ರೂಪಾಯಿ ಖರ್ಚು ಮಾಡುತ್ತಿರುವುದಾಗಿ ತಿಳಿಸಿದೆ.