ಅಗ್ನಿ-1 ಕ್ಷಿಪಣಿ ಪರೀಕ್ಷೆ (ಸಂಗ್ರಹ ಚಿತ್ರ)
ಭುವನೇಶ್ವರ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ನಿರ್ಮಾಣದ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.
ಒಡಿಶಾದ ಬಾಲಾಸೋರ್ ನಲ್ಲಿ ಮೊಬೈಲ್ ಲಾಂಚರ್ ಮೂಲಕ ಅಣ್ವಸ್ತ್ರ ಸಾಮರ್ಥ್ಯದ ಮಧ್ಯಮ ದೂರಗಾಮಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಮೆ ಮಾಡಲಾಯಿತು. ಅಗ್ನಿ-1 ಮಧ್ಯಮ ದೂರಗಾಮಿ ಖಂಡಾಂತರ ಕ್ಷಿಪಣಿಯಾಗಿದ್ದು, ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಒಂದೇ ಹಂತದಲ್ಲಿ ಸ್ಫೋಟಿಸುವ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-1 ಕ್ಷಿಪಣಿ ಸುಮಾರು 700 ಕಿ.ಮೀ ದೂರದ ಯಾವುದೇ ಗುರಿಯನ್ನು ಯಶಸ್ವಿಯಾಗಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಬಾಲಾಸೋರ್ ನಲ್ಲಿರುವ ಅಬ್ದುಲ್ ಕಲಾಂ ಐಲ್ಯಾಂಡ್ (ವೀಲರ್ ಐಲ್ಯಾಂಡ್) ಮೊಬೈಲ್ ಉಡಾವಣಾ ವಾಹನದಿಂದ ಮಂಗಳವಾರ ಬೆಳಗ್ಗೆ 8.30ರ ವೇಳೆಯಲ್ಲಿ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ನಿಗದಿತ ಗುರಿಯನ್ನು ನಿಖರ ಸಮಯದೊಳಗೆ ತಲುಪುವ ಮೂಲಕ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪಣಿ ಪ್ರತಿ ಸೆಕೆಂಡ್ ಗೆ 2.5 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದ್ದು, 9 ನಿಮಿಷ 36 ಸೆಕೆಂಡ್ ನಲ್ಲಿ 700 ಕಿ.ಮೀ ಕ್ರಮಿಸಿ ಗುರಿಗೆ ಅಪ್ಪಳಿಸುತ್ತದೆ. ಅಗ್ನಿ-1 ಕ್ಷಿಪಣಿ 12 ಟನ್ ತೂಕವಿದ್ದು, 15 ಮೀಟರ್ ಉದ್ದವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics