ಬಿಜೆಪಿ ನಾಯಕ ವಿನಯ್ ಕಟಿಯಾರ್
ನವದೆಹಲಿ: ಧರ್ಮದ ಹೆಸರಿವಲ್ಲಿ ಮುಸ್ಲಿಮರು ದೇಶವನ್ನು ಇಬ್ಭಾಗಿಸುತ್ತಿದ್ದು, ಮುಸ್ಲಿಮರು ಭಾರತ ದೇಶವನ್ನು ಬಿಟ್ಟು ಹೋಗಬೇಕೆಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಅವರು ಬುಧವಾರ ಹೇಳಿದ್ದಾರೆ.
ಓವೈಸಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ವಿನಯ್ ಕಟಿಯಾರ್ ಅವರು, ಮುಸ್ಲಿಮರು ಈ ದೇಶದಲ್ಲಿರಬಾರದು. ಧರ್ಮದ ಹೆಸರಿನಲ್ಲಿ ಮುಸ್ಲಿಮರು ದೇಶವನ್ನು ಇಬ್ಭಾಗ ಮಾಡುತ್ತಿದ್ದಾರೆ. ಹೀಗಿರುವಾಗ ಅವರು ದೇಶದಲ್ಲಿರುವ ಅಗತ್ಯವೇನಿದೆ? ಭಾರತದಲ್ಲಿರುವ ಮುಸ್ಲಿಮರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಬೇಕು. ಇಂದು ನಮ್ಮ ದೇಶದಲ್ಲಿ ಯಾವ ಕೆಲಸವನ್ನು ಅವರು ಮಾಡುತ್ತಿದ್ದಾರೋ, ಆ ಕೆಲಸವನ್ನು ಅವರು ಅಲ್ಲಿಯೇ ಮಾಡಲಿ ಎಂದು ಹೇಳಿದ್ದಾರೆ.
ವಂದೇ ಮಾತರಂ ಹಾಗೂ ರಾಷ್ಟ್ರಧ್ವಜವನ್ನು ಗೌರವಿಸದವರನ್ನು ಶಿಕ್ಷಿಸುವ ಕಾನೂನು ಜಾರಿಯಾಗಬೇಕು. ಪಾಕಿಸ್ತಾನದ ಧ್ಜಜವನ್ನು ನಮ್ಮ ನೆಲದಲ್ಲಿ ಹಾರಿಸುವವರಿಗೆ ಶಿಕ್ಷೆಯನ್ನು ನೀಡಬೇಕೆಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಓವೈಸಿಯವರು, ಭಾರತೀಯ ಮುಸ್ಲಿಮರನ್ನು 'ಪಾಕಿಸ್ತಾನಿ'ಗಳೆಂದು ಕರೆಯುವವರನ್ನು ಶಿಕ್ಷಿಸಬೇಕು. ಅಂತಹವರನ್ನು ಜೈಲಿಗಟ್ಟಬೇಕು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕೆಂದು ಹೇಳಿದ್ದರು.