ನವದೆಹಲಿ: ಕೇಂದ್ರ ಬಜೆಟ್ 2018 ಅಧಿವೇಶನದಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಚರ್ಚೆ ಸಂದರ್ಭದಲ್ಲಿ ಎರಡು ದಿನಗಳ ಕಾಲ ಸದಸನದಲ್ಲಿ ಕಡ್ಡಾಯವಾಗಿ ಉಪಸ್ಥಿತಿಯಿರಬೇಕೆಂದು ಲೋಕಸಭಾ ಸದಸ್ಯರಿಗೆ ಬಿಜೆಪಿ ಮಂಗಳವಾರ ವಿಪ್ ಜಾರಿ ಮಾಡಿದೆ.
2018ನೇ ಸಾಲಿನ ಕೇಂದ್ರ ಬಜೆಟ್ ಕುರಿತಂತೆ ಫೆ.7-8 ರಂದು ಸಂಸತ್ತಿನಲ್ಲಿ ಚರ್ಚೆ ನಡೆಯಲಿದ್ದು. ಚರ್ಚೆಯಲ್ಲಿ ಕಡ್ಡಾಯವಾಗಿ ಉಪಸ್ಥಿತಿ ಇರುವಂತೆ ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದಾನ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ ಆವರು ನಿನ್ನೆ ಭಾಷಣ ಮಾಡಿದ್ದರು. ಈ ವೇಳೆ ಜಿಎಸ್ ಟಿ ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಪಕೋಡ ಮರಾಟ ಮಾಡುವುದೂ ಒಂದು ಉದ್ಯೋಗ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ಪ್ರಧಾನಿ ಮೋದಿ ಅವರು ಸಂದರ್ಶನವೊಂದರಲ್ಲಿ ಪಕೋಡ ಮರಾಟ ಮಾಡುವುದೂ ಒಂದು ಉದ್ಯೋಗ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಿದಂಬರಂ ಅವರು, ಪಕೋಡಾ ಮಾರುವುದೂ ಒಂದು ಉದ್ಯೋಗ ಎಂಬುದಾದರೆ ಭಿಕ್ಷೆ ಬೇಡುವುದೂ ಒಂದು ಉದ್ಯೋಗವೇ. ಇನ್ನು ಮೇಲೆ ತಮ್ಮ ಬದುಕನ್ನು ನಡೆಸುವುದಕ್ಕಾಗಿ ಭಿಕ್ಷೆ ಬೇಡುವ ಬಡ ಮತ್ತು ದುರ್ಬಲ ವರ್ಗದ ಜನರನ್ನೂ ಉದ್ಯೋಗಿಗಳು ಎಂದು ಪರಿಗಣಿಸೋಣ ಎಂದು ಚಿದಂಬರಂ ವ್ಯಂಗ್ಯವಾಡಿದ್ದರು.