ನವದೆಹಲಿ: ಯೋಗ ಗುರು ಬಾಬಾ ರಾಮ್'ದೇವ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಮೆಗಾ ಟಿವಿ ಸರಣಿ ಕಾರ್ಯಕ್ರಮವೊಂದು ಕಿರುತೆರೆಯಲ್ಲಿ ಪ್ರಸಾರವಾಗಲು ಸಿದ್ಧಗೊಂಡಿದ್ದು, ಫೆ.12 ರಿಂದ ದೇಶಾದಾದ್ಯಂತ ಬಿತ್ತರಗೊಳ್ಳಲಿದೆ.
ಡಿಸ್ಕವರಿ ಇಂಡಿಯಾದಿಂದ ಆರಂಭವಾಗಿರುವ ಹೊಸ ಮನರಂಜನಾ ಚಾನೆಲ್ ಡಿಸ್ಕವರಿ ಜೆಟ್'ನಲ್ಲಿ ರಾಮ್ ದೇವ್ ಕುರಿತ ಜೀವನ ಚರಿತ್ರೆ ಪ್ರಸಾರಗೊಳ್ಳಲಿದೆ. ಸ್ವಾಮಿ ರಾಮ್'ದೇವ್ ಏಕ್ ಸಂಘರ್ಷ ಎಂಬ ಹೆಸರಿನಲ್ಲಿ ಸೂಮಾರು ರೂ.80 ಕೋಟಿ ವೆಚ್ಚರಲ್ಲಿ ಟಿವಿ ಸರಣಿ ಕಾರ್ಯಕ್ರಮ ತಯಾರಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಮ್'ದೇವ್ ಅವರು, ನನ್ನ ಜೀವನದ ಕಥೆ ಕುರಿತಂತೆ ಡಿಸ್ಕವರಿ ಜೀಟ್ ಟಿವಿ ಸರಣಿ ಆರಂಭಿಸಿರುವುದಕ್ಕೆ ನಾನು ವಿನಮ್ರನಾಗಿದ್ದೇನೆ. ಆರಂಭದಲ್ಲಿ ನನ್ನ ಜೀವನ ಚರಿತ್ರೆಯನ್ನು ಟಿವಿ ಸರಣಿಯಾಗಿ ಮಾಡಲು ಉತ್ಸುಕನಾಗಿರಲಿಲ್ಲ. ಆದರೆ, ಡಿಸ್ಕವರಿ ಜೀಟ್ ಅವರ ಹೈಮಮ್ಕಿನ್ ತತ್ವವು ನನ್ನ ಗಮನವನ್ನು ಸೆಳೆಯಿತು ಎಂದು ಹೇಳಿದ್ದಾರೆ.
ನನ್ನ ಜೀವನ ಸುಲಭದ ಸವಾರಿಯಲ್ಲ. ಪ್ರತೀಯೊಂದು ಹಂತದಲ್ಲೂ ಸಂಘರ್ಷವನ್ನು ಎದುರಿಸಿದ್ದೇನೆ. ಜೀವನ ಚರಿತ್ರೆಯಲ್ಲಿ ಎಲ್ಲವನ್ನು ತಿಳಿಸಲಾಗಿದೆ. ಜೀವನದಲ್ಲಿ ಎದುರಾದ ಸವಾಲುಗಳಿಗೆ ಹೆದರಿ ಎಂದಿಗೂ ಹಿಂಜರಿಯಲಿಲ್ಲ. ಈ ಸಂದೇಶವನ್ನು ದೇಶದ ಪ್ರತೀಯೊಬ್ಬರಿಗೂ ತಿಳಿಯಬಯಸುತ್ತೇನೆ. ಜೀವನದಲ್ಲಿ ಸವಾಲಗಳು ಬರುತ್ತಲೇ ಇರುತ್ತವೆ. ಇವುಗಳನ್ನು ಮೆಟ್ಟಿ ನಿಂತರೆ, ನಮ್ಮ ಯಶಸ್ಸನ್ನು ಯಾರೂ ತಪ್ಪಿಸಲೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.