ದೇಶ

ಮೋದಿಕೇರ್ -ಎರಡು ತಿಂಗಳೊಳಗೆ ನೀತಿ ಆಯೋಗದಿಂದ ನೀಲಿನಕ್ಷೆ ತಯಾರಿ

Nagaraja AB

ನವದೆಹಲಿ:  ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಬಜೆಟ್ ನಲ್ಲಿ ಕಡಿಮೆ ಪ್ರಮಾಣದ ಹಣ ಮೀಸಲಿರಿಸಲಾಗಿದೆ ಎಂಬ ತೀವ್ರ ಟೀಕೆಗಳ ಬೆನ್ನಲ್ಲೇ ಎರಡು ತಿಂಗಳೊಳಗೆ ಮೋದಿಕೇರ್ ನೀಲಿನಕ್ಷೆ ರೂಪಿಸುವತ್ತ ನೀತಿ ಆಯೋಗ ಮುಂದಾಗಿದೆ.

ವಿಮಾ ನೀಲಿನಕ್ಷೆ ರೂಪಿಸುವಲ್ಲಿ ನೀತಿ ಆಯೋಗ ಕಾರ್ಯೋನ್ಮುಖವಾಗಿದೆ . ಎರಡು ತಿಂಗಳೊಳಗೆ ವರದಿ ಸಲ್ಲಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯ ಪೂರ್ಣ ವೆಚ್ಚ, ನಿಧಿಯ ಮಾದರಿ, ಒಟ್ಟಾರೇ, ಮಾನವ ಸಂಪನ್ಮೂಲ , ದೇಶದಲ್ಲಿರುವ ಆರೋಗ್ಯ ಸಂಬಂಧಿತ ಮೂಲಕೌರ್ಯಸೌಕರ್ಯ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ರಾಜ್ಯಗಳನ್ನೊಳಗೊಂಡ ನೀಲಿನಕ್ಷೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಗೆ ಸಂಬಂಧಿಸಿದ ಪ್ರತ್ಯೇಕ ವರದಿಯನ್ನು ಆಯೋಗ ನೀಡಲಿದೆ.ಇದರಿಂದ ಅಲ್ಪ ಅವಧಿಯಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

2018-19ರ ಅವಧಿಯಲ್ಲಿ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಗಾಗಿ ಸರ್ಕಾರ 2 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ.ಇದಲ್ಲದೇ, ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ನಿಧಿಯನ್ನು  ಬಳಸಿಕೊಳ್ಳಲಾಗುತ್ತಿದೆ. ಆದಾಗ್ಯೂ,10 ಕೋಟಿ ಕುಟುಂಬಗಳ 50 ಕೋಟಿ
ಫಲಾನುಭವಿಗಳಿಗೆ ಯೋಜನಾ ಅನುಷ್ಠಾನಕ್ಕಾಗಿ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ ಎಂದು ಅಂದಾಜು ವೆಚ್ಚ ಮಾಡಲಾಗಿದೆ.

 ಖಾಸಗಿ ಆಸ್ಪತ್ರೆಗಳು ಮತ್ತು ಯೋಜನೆಗಳನ್ನೊಳಗೊಂಡಂತೆ ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ನೀಲಿನಕ್ಷೆಯನ್ನೂ ಸಹ ಈ ವರದಿ ನೀಡಲಿದೆ. ವರದಿ ಬಂದ ನಂತರ ಆರೋಗ್ಯ ಸಂಬಂಧಿತ ಮೂಲಸೌಕರ್ಯಗಳ ಕೊರತೆ ಇರುವ ಹಿಂದುಳಿದಿರುವ
ರಾಜ್ಯಗಳಲ್ಲಿ  ನೀತಿ ಆಯೋಗ ಜೊತೆಯಾಗಿ ಕಾರ್ಯನಿರ್ವಹಿಸಲಿದೆ. ನಂತರ ಇದೇ ಮಾದರಿಯನ್ನು ಇತರ ರಾಜ್ಯಗಳಿಗೂ ಅನ್ವಯಿಸಲಾಗುತ್ತದೆ ಎಂಬುದು ಉನ್ನತ ಮಾಹಿತಿಗಳಿಂದ ತಿಳಿದುಬಂದಿದೆ.

SCROLL FOR NEXT