ಜೈಪುರ: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಣಿ ಪದ್ಮಾವತಿಗೆ ಸಂಬಂಧಿಸಿದಂತೆ ಇರುವ ಇತಿಹಾಸವನ್ನು ತಿರುಚಬಾರದು, ರಾಣಿ ಪದ್ಮಾವತಿ ಸಮಸ್ತ ಮಹಿಳೆಯರ ಗೌರವವನ್ನು ಪ್ರತಿನಿಧಿಸಿದಾಕೆ ಎಂದು ಹೇಳಿದ್ದಾರೆ.
ಜೈಪುರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಿಭಾ ಪಾಟೀಲ್, ಸಿನಿಮಾಗಾಗಿ ಇತಿಹಾಸವನ್ನು ತಿರುಚಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತ್ ಚಿತ್ರ ಬಿಡುಗಡೆಯಾದ ಬೆನ್ನಲ್ಲೆ ಪ್ರತಿಭಾ ಪಾಟೀಲ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.