ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ 
ದೇಶ

2018-19ನೇ ಕೇಂದ್ರ ಬಜೆಟ್ ಸಂಪೂರ್ಣ ವಿಫಲ; ಚಿದಂಬರಂ

2018-19ನೇ ಸಾಲಿನ ಕೇಂದ್ರ ಬಜೆಟ್ ಸಂಪೂರ್ಣ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಭಾನುವಾರ ಹೇಳಿದ್ದಾರೆ...

ಚೆನ್ನೈ: 2018-19ನೇ ಸಾಲಿನ ಕೇಂದ್ರ ಬಜೆಟ್ ಸಂಪೂರ್ಣ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಭಾನುವಾರ ಹೇಳಿದ್ದಾರೆ. 
ಕೇಂದ್ರ ಬಜೆಟ್ ಕುರಿತಂದೆ ವಿಮರ್ಶಾತ್ಮಕ ವಿಶ್ಲೇಷಣೆ ಕುರಿತಂತೆ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಮಂಡನೆ ಮಾಡಿದ್ದ 2018-19ನೇ ಸಾಲಿನ ಕೇಂದ್ರ ಬಜೆಟ್ ಸಂಪೂರ್ಣ ವಿಫಲಗೊಂಡಿದೆ. ಭಾರತದ ಭವಿಷ್ಯದ ಆರ್ಥಿಕತೆಯ ಚಿತ್ರಣವನ್ನು ರಾಷ್ಟ್ರದ ಜನತೆ ಈಗಲೇ ನೋಡಬಹುದಾಗಿದೆ ಎಂದು ಹೇಳಿದ್ದಾರೆ. 
ಕೇಂದ್ರದ ಬಜೆಟ್ ಪರಿಣಾಮ ಹಣದುಬ್ಬರ ಹಾಗೂ ಹಣಕಾಸಿನ ಕೊರತೆ ಹೆಚ್ಚಾಗಲಿದೆ. ಬಹದಾರ್ಥಿಕ ಸ್ಥಿರತೆಯಲ್ಲಿ ದೇಶ ರಾಜಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಎದುರಾಗಲಿದೆ. ಕೃಷಿ ವಲಯದಲ್ಲಿ ಸಂಕಷ್ಟ ಪರಿಸ್ಥಿತಿಗಳು ಮುಂದುವರೆಯಲಿದೆ. ಯುವಜನತೆ ನಿರುದ್ಯೋಗ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ರಫ್ತು ನೆಲಕಚ್ಚಲಿದೆ. ಯಾವುದೇ ಆಯಾಮದಲ್ಲೇ ನೋಡಿದರೂ ಈ ಬಾರಿಯ ಬಜೆಟ್ ಸಂಪೂರ್ಣವಾಗಿ ವಿಫಲಗೊಂಡಿದೆ. ಸರ್ಕಾರದ ಐದನೇ ಬಜೆಟ್ ನ್ನು ನೋಡಿದರೆ, 6ನೇ ಬಜೆಟ್ ನ್ನು ಈ ಸರ್ಕಾರ ಮಂಡನೆ ಮಾಡದಿರುವುದೇ ಒಳ್ಳೆಯದು ಎನಿಸುತ್ತದೆ ಎಂದು ತಿಳಿಸಿದ್ದಾರೆ. 
ಆರ್ಥಿಕ ಬಲವರ್ಧನೆ, ಕೃಷಿ ವಲಯದ ಸಂಕಷ್ಟ ಮತ್ತು ಉದ್ಯೋಗ ಸೃಷ್ಟಿಯಂತಹ ಸವಾಲುಗಳನ್ನು ಎದುರಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಆರ್ಥಿಕತೆ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಅಸಮರ್ಥವಾಗುತ್ತಿದೆ ಎಂದಿದ್ದಾರೆ. 
ಇದೇ ವೇಳೆ ರಾಷ್ಟ್ರೀ ಆರೋಗ್ಯ ರಕ್ಷಣಾ ಯೋಜನೆ ಕುರಿತು ಟೀಕೆ ಮಾಡಿರುವ ಅವರು, ಸರ್ಕಾರದ ಬಳಿ ಈ ಯೋಜನೆಗೆ ಹೂಡಿಕೆ ಮಾಡಲು ಹಣವೇ ಇರುವುದಿಲ್ಲ. ಯೋಜನೆ ಬೆಳಕು ಕಾಣುವುದಿಲ್ಲ. ಒಂದು ವೇಳೆ ಕಂಡರೂ ಅದು ಮೂಲ ರೂಪದಲ್ಲಿಯೇ ಇರುತ್ತದೆ. ಶೇ.90 ರಷ್ಟು ಯೋಜನೆಯನ್ನು ಬಳಕೆ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT