ದುಮ್ಕಾ(ಜಾರ್ಖಂಡ್): ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ವಾಹನವೊಂದು ನದಿಗೆ ಉರುಳಿಬಿದ್ದು ಅದರಲ್ಲಿದ್ದ 8 ಪ್ರಯಾಣಿಕರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತ ಪ್ರಯಾಣಿಕರ ಗುರುತು ಇನ್ನೂ ಸಿಕ್ಕಿಲ್ಲ. ಗಾಯಗೊಂಡವರನ್ನು ದುಮ್ಕಾದಲ್ಲಿರುವ ಸಾದರ್ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.