ಕರಾಚಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಮನುಷ್ಯ ಎಂದು ಕರೆದು ಪಕ್ಷದಿಂದ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕರಾಚಿಯ ಸಮಾರಂಭದಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ ಎಂದು ಹೇಳಿದ್ದಾರೆ.
ನಿರಂತರ ಮಾತುಕತೆಯ ಮೂಲಕ ಎರಡೂ ದೇಶಗಳು ಸಂಬಂಧವನ್ನು ಸುಧಾರಿಸಿಕೊಳ್ಳಬಹುದು. ಸೌಹಾರ್ದಯುತ ಮಾತುಕತೆಯೊಂದೆ ಭಾರತ-ಪಾಕಿಸ್ತಾನ ಸ್ನೇಹವೃದ್ಧಿಗೆ ಪರಿಹಾರ ಎಂದು ಹೇಳಿದ್ದಾರೆ.
ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡುತ್ತೇನೆ. ಭಾರತ ಕೂಡ ತನ್ನ ನೆರೆಯವರನ್ನು ತನ್ನಂತೆಯೇ ಪ್ರೀತಿಸಬೇಕು. ಕಾಶ್ಮೀರ ಹಾಗೂ ಭಯೋತ್ಪಾದನೆ ಎರಡೂ ದೇಶಗಳಿಗೂ ತೊಡಕಾಗಿರುವ ಪ್ರಮುಖ ಸಮಸ್ಯೆ ಎಂದರು.
ಇನ್ನು ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ಸರ್ಕಾರವಧಿಯಲ್ಲಿ ಎರಡೂ ದೇಶಗಳ ಸಂಬಂಧ ಸುಧಾರಣೆಗೆ ಉತ್ತಮ ವೇದಿಕೆ ಕಲ್ಪಿಸಲಾಗಿತ್ತು ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics