ಯೋಗಿ ಆದಿತ್ಯನಾಥ್ ಮತ್ತು ಸಪ್ನಾ ಚೌಧುರಿ 
ದೇಶ

ಸಪ್ನಾ ಚೌಧುರಿ ಕಾರ್ಯಕ್ರಮದ ಟಿಕೆಟ್ ನಲ್ಲಿ ಯೋಗಿ ಆದಿತ್ಯನಾಥ್ ಪೋಟೋ: ಬಿಜೆಪಿ ಮುಖಂಡರಲ್ಲಿ ಅಸಮಾಧಾನ

ಹಿಂದಿ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧುರಿ ಕಾರ್ಯಕ್ರಮದ ಟಿಕೆಟ್ ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ...

ಕಾನ್ಪುರ: ಹಿಂದಿ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧುರಿ ಕಾರ್ಯಕ್ರಮದ ಟಿಕೆಟ್ ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪೋಟೋ ಹಾಕಿರುವುದು ಬಿಜೆಪಿ ಮುಖಂಡರಲ್ಲಿ ಒಳಜಗಳಕ್ಕೆ ಕಾರಣವಾಗಿದೆ. 
ಕಾನ್ಪುರದಲ್ಲಿ ಸಪ್ನಾ ಚೌಧುರಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು, ಈ ಕ್ರಾಯಕ್ರಮದ ಟಿಕೆಟ್ ನಲ್ಲಿ ಸಿಎಂ ಫೋಟೋ ಬಳಕೆ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಇದರಿಂದ ಪೋಲೀಸ್ ಇಲಾಖೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಡ್ಯಾನ್ಸರ್ ಕಾರ್ಯಕ್ರಮಕ್ಕೆ ಯೋಗಿ ಆದಿತ್ಯನಾಥ್ ಫೋಟೋ ಹಾಕಿರುವುದಕ್ಕೆ ಬಿಜೆಪಿ ಶಾಸಕಿ ನಿಲಿಮಾ ನಟಿಯಾರ್ ಮತ್ತು ಕಾನ್ಪುರ ಜಿಲ್ಲೆ ಬಿಜೆಪಿ ಮುಖ್ಯಸ್ಥ ಸುರೇಂದ್ರ ಮೈಥಾನಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.ಆದರೆ ಕಾನ್ಪುರ  ಮೇಯರ್ ಪ್ರಮೀಳಾ ಪಾಂಡೆ ಭಾವಚಿತ್ರ ಹಾಕಿರುವುದು ಅಪರಾಧವಲ್ಲ  ಎಂದು ಪ್ರತಿಪಾದಿಸಿದ್ದಾರೆ. ಭಾವಚಿತ್ರ ಹಾಕಿರುವುದು ಯಾವುದೇ ರೀತಿಯ ತಪ್ಪಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 
ಕಾರ್ಯಕ್ರಮಕ್ಕೂ ಮುನ್ನ ಉಂಟಾಗದಿರುವ ವಿವಾದದಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕಾರ್ಯಕ್ರಮ ಆಯೋಜಿಸಿರುವ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವಾರಣ ನಿರ್ಮಾಣವಾಗಿದೆ. ಟಿಕೆಟ್ ಪಡೆಯದೆ ಕೆಲವು ಮಂದಿ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ದಾರೆ.ಈ ವೇಳೆ ಪೊಲೀಸರು ಸ್ಥಳೀಯರ ನಡುವೆ ಘರ್ಷಣೆ ನಡೆದಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದೇ ವೇಳೆ ಕೆಲವು ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಇದರಿಂದಾಗಿ ಹಲವು ಮಕ್ಕಳು, ಅಧಿಕಾರಿಗಳ ಸಂಬಂಧಿಕರು ಗಾಯಗೊಂಡಿದ್ದಾರೆ. ಹಲವು  ಸರ್ಕಾರಿ ಅಧಿಕಾರಿಗಳಿಗೆ ಉಚಿತ ಪಾಸ್ ನೀಡಲಾಗಿತ್ತು.
ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಸಂಬಂಧ ವಿವಿಧ  ಇಲಾಖೆಗಳ ಅಧಿಕಾರಿಗಳು ಪರಸ್ಪರ ನಿಂದಿಸಿಕೊಂಡಿದ್ದಾರೆ, ಜಿಲ್ಲಾಡಳಿತ ಪರಿಸ್ಥಿತಿ ಸುಧಾರಿಸಲು ಹಲವು ಯತ್ನಗಳನ್ನು ನಡೆಸಿದೆ. ಮಾಧ್ಯಮಗಳಿಗೆ ವಿಷಯ ತಿಳಿಯದಂತೆ ಪ್ರಕರಣ ಮುಚ್ಚಿ ಹಾಕಲು ಜಿಲ್ಲಾಡಳಿತ ಯತ್ನಿಸಿದೆ ಎಂದು ಆರೋಪಿಸಲಾಗಿದೆ.
ಈ ಕಾರ್ಯಕ್ರಮವನ್ನು ಕಾನ್ಪುರದ ಕಾಕದೇವ ಪ್ರದೇಶದಲ್ಲಿ ಲೈಂಗಿಕ ರೋಗ ತಜ್ಞ ಡಾ.ಅನಂದ್ ಜಾ ಆಯೋಜಿಸಿದ್ದರು. ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಡಾ. ಆನಂದ್ ಜಾ ಅವರನ್ನು ಸನ್ಮಾಸಿತ್ತು, ಇದರ ಅಂಗವಾಗಿ ಸಪ್ನಾ ಚೌಧುರಿ ನೃತ್ಯಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT