ಕರಣ್ ನಗರ ಜನವಸತಿ ಪ್ರದೇಶದಲ್ಲಿ ಉಗ್ರರ ದಾಳಿ 
ದೇಶ

ಸುಂಜವಾನ್ ದಾಳಿ ಬೆನ್ನಲ್ಲೇ ಕಾಶ್ಮೀರದಲ್ಲಿ ಮತ್ತೊಂದು ಉಗ್ರ ದಾಳಿ, ಓರ್ವ ಯೋಧ ಹುತಾತ್ಮ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸುಂಜವಾನ್ ಸೇನಾ ಕ್ಯಾಂಪ್ ಮೇಲಿನ ಉಗ್ರ ದಾಳಿ ಬೆನ್ನಲೇ ಜಮ್ಮುವಿನಲ್ಲಿ ಮತ್ತೊಂದು ಉಗ್ರ ದಾಳಿ ನಡೆದಿದ್ದು, ಜಮ್ಮುವಿನಲ್ಲಿ ಅವಿತಿರುವ ಉಗ್ರರು...

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸುಂಜವಾನ್ ಸೇನಾ ಕ್ಯಾಂಪ್ ಮೇಲಿನ ಉಗ್ರ ದಾಳಿ ಬೆನ್ನಲೇ ಜಮ್ಮುವಿನಲ್ಲಿ ಮತ್ತೊಂದು ಉಗ್ರ ದಾಳಿ ನಡೆದಿದ್ದು, ಜಮ್ಮುವಿನಲ್ಲಿ ಅವಿತಿರುವ ಉಗ್ರರು ಸೇನಾಪಡೆಗಳ ಮೇಲೆ  ಗುಂಡಿನ ದಾಳಿ ನಡೆಸಿದ್ದಾರೆ.
ಜಮ್ಮುವಿನ ಕರಣ್ ನಗರ ಜನವಸತಿ ಪ್ರದೇಶದಲ್ಲಿ ಲಷ್ಕರ್ ಇ ತೊಯ್ಹಾ ಉಗ್ರ ಸಂಘಟನೆಯ ಉಗ್ರಗಾಮಿಗಳು ದಾಳಿ ನಡೆಸಿದ್ದು, ಕಟ್ಟಡವೊಂದರಲ್ಲಿ ಅವಿತು ಕುಳಿತು ಸೇನೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದಾರೆ.  ಸೇನಾ ಮೂಲಗಳ ಪ್ರಕಾರ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಕರಣ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದರಲ್ಲಿ ಅವಿತಿದ್ದು, ಸತತ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ  ಕಟ್ಟಡವನ್ನು ಸೇನಾಪಡೆಗಳು ಸುತ್ತುವರೆದಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದಲ್ಲಿರುವ ಕಟ್ಟಡದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದ್ದು, ಖುದ್ಧು ಸೇನಾಪಡೆಯ ಸಿಬ್ಬಂದಿಗಳೇ ನಾಗರಿಕರನ್ನು ತೆರವುಗೊಳಿಸಿದ್ದಾರೆ. ಕರಣ್ ನಗರದ  ಸಮೀಪದಲ್ಲೇ ಸೇನೆಯ ಸಿಆರ್ ಪಿಎಫ್ ಸೇನಾ ಶಿಬಿರವಿದ್ದು, ಇದರೊಳೆಗೆ ನುಸುಳಿ ದಾಳಿ ಮಾಡಬೇಕು ಎನ್ನವುದು ಉಗ್ರ ಯೋಜನೆಯಾಗಿತ್ತು. ಆದರೆ ಇದಕ್ಕೂ ಮೊದಲೇ ಸೇನಾಪಡೆಗಳನ್ನು ಉಗ್ರರನ್ನು ಗುರುತಿಸುವ ಮೂಲಕ  ಆಗಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.
ಇನ್ನು ನಿನ್ನೆ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನಾಗಿದ್ದು, ಮತ್ತೋರ್ವ ಪೊಲೀಸ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT