ಜಮ್ಮು: ಸುಂಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಹುತಾತ್ಮ ಯೋಧನ ಶವ ಪತ್ತೆಯಾಗಿದೆ.
ಸೋಮವಾರ ಸಂಜೆ ಆರನೇ ಸೈನಿಕನ ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 7ಕ್ಕೇರಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಶ್ರೀನಗರದ ಕರಣ್ನಗರದಲ್ಲಿ ಪ್ರತ್ಯಕ್ಷವಾದ ಮತ್ತೊಂದು ಉಗ್ರರ ತಂಡ, ಸಿಆರ್ಪಿಎಫ್ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ್ದು, ಸೈನಿಕರ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಓರ್ವ ನಾಗರಿಕ ಮತ್ತು ಆರು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.
ಆರು ಮಹಿಳೆಯರು ಸೇರಿದಂತೆ ಮಕ್ಕಳು ಗಾಯಗೊಂಡಿದ್ದಾರೆ. ಲಷ್ಕರ್ ಹಾಗೂ ಜೈಷ್ ಉಗ್ರರ ಜಂಟಿ ತಂಡ ಫೆಬ್ರವರಿ 10 ರಂದು ಸುಂಜ್ವಾನ ಸೇನಾ ಶಿಬಿರದ ಮೇಲೆ ಗ್ರೇನೇಡ್ ದಾಳಿ ನಡೆಸಿತ್ತು.