ದೇಶ

ವಿವಿಐಪಿ ಕಾಪ್ಟರ್ ಹಗರಣ: ಛತ್ತೀಸ್ ಘಡ ಸಿಎಂ ಪುತ್ರನಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್

Shilpa D
ನವದೆಹಲಿ: ಬಹುಕೋಟಿ ರೂಪಾಯಿ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಅತಿ ಗಣ್ಯರಿಗಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯಿಂದ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸ್ವರಾಜ್ ಅಭಿಯಾನ್ ಎಂಬ ಎನ್ ಜಿಓ ಛತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಪುತ್ರನ ವಿರುದ್ಧ ವಿಚಾರಣೆ ನಡೆಸುವಂತೆ ಪಿಐಎಲ್ ಸಲ್ಲಿಸಿತ್ತು. 
ಸಿಎಂ ರಮಣ್ ಸಿಂಗ್ ಪುತ್ರನ ವಿದೇಶ ಬ್ಯಾಂಕ್ ಖಾತೆಗೂ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೂ ಸಂಬಂಧಿವಿದೆಯೆಂದು ಎನ್ ಜಿ ಓ ಆರೋಪಿಸಿತ್ತು. ಎನ್ ಜಿ ಓ ಪರ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.  ಆದರೆ ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟ್ ತನಿಖೆ ನಡೆಸುವ ಅಗತ್ಯವಿಲ್ಲವೆಂದು ತಿಳಿಸಿ ಪಿಐಎಲ್ ಅನ್ನು ತಿರಸ್ಕರಿಸಿದೆ. 
SCROLL FOR NEXT