ದೇಶ

ಸೇನೆಯೊಂದಿಗೆ ಆರ್ ಎಸ್ ಎಸ್ ಹೋಲಿಕೆ: ಮೋಹನ್ ಭಾಗವತ್ ವಿರುದ್ಧ ಕೇಸು ದಾಖಲು

Shilpa D
ಪಾಟ್ನಾ: ಅಸಂಬದ್ಧ ಹೇಳಿಕೆ ನೀಡಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆಂಬ ಆರೋಪದ ಮೇಲೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಬಿಹಾರದ ಮುಜಾಫರ್ ನಗರ ಕೋರ್ಟ್ ನಲ್ಲಿ ದೂರು ದಾಖಲಾಗಿದೆ.
ಮುಜಾಫರ್  ನಗರ ನಿವಾಸಿ ಎಂ.ರಾಜು ನಾಯರ್ ಎಂಬುವರು ದೂರು ದಾಖಲಿಸಿದ್ದು, ನ್ಯಾಯಾಲಯ ಫೆಬ್ರವರಿ 15 ವಿಚಾರಣೆಗೆ ದಿನಾಂಕ ನಿಗದಿ ಪಡಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೇವಲ ಜನರಿಗೆ ನೋವುಂಟು ಮಾಡಿಲ್ಲ, ಅವರ ಹೇಳಿಕೆಯಿಂದ ಭಾರತೀಯ ಸೇನೆಗೆ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ. 
ಮೂರು ದಿನಗಳಲ್ಲಿ ಸೇನಾ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಸಾಮರ್ಥ್ಯ ಸಂಘಕ್ಕೆ ಇದೆ. ಇದು ನಮ್ಮ ಶಕ್ತಿ. ಸೇನೆಗೆ ಇದಕ್ಕಾಗಿ 6–7 ತಿಂಗಳು ಸಮಯ ಬೇಕಾಗುತ್ತದೆ. ದೇಶ ಯುದ್ಧ ಎದುರಿಸುವ ಪರಿಸ್ಥಿತಿ ಉಂಟಾದರೆ, ಸಂವಿಧಾನ ಅವಕಾಶ ನೀಡಿದರೆ, ಸ್ವಯಂಸೇವಕರು ಮುನ್ನೆಲೆಯಲ್ಲಿ ನಿಂತು ಹೋರಾಡಲು ಸಿದ್ಧ ಇರುತ್ತಾರೆ’ ಎಂದು ಭಾಗವತ್‌ ಅವರು ಬಿಹಾರದ ಮುಜಫ್ಫರ್‌ಪುರದಲ್ಲಿ ಭಾನುವಾರ ಹೇಳಿದ್ದಾಗಿ ವರದಿಯಾಗಿತ್ತು.
SCROLL FOR NEXT