ದೇಶ

14 ಮುಸ್ಲಿಂರ ಘರ್ ವಾಪಸಿ ಕಾರ್ಯಕ್ರಮದ ವೇಳೆ ಮಾಧ್ಯಮದವರ ಮೇಲೆ ಹಲ್ಲೆ

Vishwanath S
ಕೋಲ್ಕತ್ತಾ: ಕೇಂದ್ರ ಕೋಲ್ಕತ್ತಾದ ರಾಣಿ ರಾಶ್ಮೋನಿ ಅವೆನ್ಯೂನಲ್ಲಿ ಹಿಂದು ಸಮಿತಿ ಆಯೋಜಿಸಿದ್ದ 14 ಮುಸ್ಲಿಂರ ಘರ್ ವಾಪಸಿ ಕಾರ್ಯಕ್ರಮದ ವೇಳೆ ಮಾಧ್ಯಮ ವರದಿಗಾರನ ಮೇಲೆ ಹಲ್ಲೆ ಮಾಡಲಾಗಿದೆ.
ಹಿಂದೂ ಸಮಿತಿ ಸದಸ್ಯರು ಹಲವು ಮಾಧ್ಯಮಗಳ ವರದಿಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹುಸೈನ್ ಅಲಿ ಕುಟುಂಬದ 14 ಇಂದು ಹಿಂದು ಧರ್ಮಕ್ಕೆ ಮರು ಮತಾಂತರಗೊಳ್ಳುತ್ತಿದ್ದರು. ಈ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ಪ್ರವೇಶ ನೀಡಲಾಗಿರಲಿಲ್ಲ ಆದರೂ ಘಟನಾ ಪ್ರದೇಶಕ್ಕೆ ಮಾಧ್ಯಮದವರು ಹೋಗಿದ್ದರಿಂದ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಘರ್ ವಾಪಸಿ ಬಗ್ಗೆ ಮಾತನಾಡಿದ ಹಿಂದೂ ಸಮಿತಿಯ ಮುಖ್ಯಸ್ಥ ತಪನ್ ಘೋಷ್ 14 ಮಂದಿ ಇಂದು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಪಶ್ಚಿಮ ಬಂಗಾಳದ ನಾನಾ ಕಡೆಗಳಲ್ಲಿ ಸಾರ್ವಜನಿಕವಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
ಘರ್ ವಾಪಸಿ ಕಾರ್ಯಕ್ರಮದ ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ತಪನ್ ಘೋಷ್ ರನ್ನು ಬಂಧಿಸಿದ್ದಾರೆ. ಇನ್ನು ಪತ್ರಕರ್ತರ ಮೇಲಿನ ಹಲ್ಲೆ ಕುರಿತಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಅಲ್ಲದೆ ಹಲ್ಲೆಕೋರರ ಮೇಲೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
SCROLL FOR NEXT