ದೇಶ

ಜಮ್ಮು-ಕಾಶ್ಮೀರದ ಮೇಲೆ ಪಾಕ್ ದಾಳಿ ನಡೆಸಿದಾಗ ನೆಹರು ಆರ್ ಎಸ್ ಎಸ್ ನೆರವು ಕೋರಿದ್ದರು: ಉಮಾಭಾರತಿ

Shilpa D
ಭೂಪಾಲ್: ಭಾರತೀಯ ಸೇನೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ಐಎಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆಗೆ ತೀರುಗೇಟು ನೀಡಿರುವ ಕೇಂದ್ರ ಸಚಿವೆ ಉಮಾ ಭಾರತಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ  ಅಂದರೆ 1948-49ರಲ್ಲಿ ಪಾಕಿಸ್ಥಾನ ಪಡೆ ಜಮ್ಮು ಮತ್ತು ಕಾಶ್ಮೀರದ ಮೇಲೆ  ದಾಳಿ ನಡೆಸಿದಾಗ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಆರ್ಎಸ್‌ಎಸ್‌ ನೆರವನ್ನು ಕೋರಿದ್ದರು ಎಂದು ಉಮಾ ಭಾರತಿ ತಿಳಿಸಿದ್ದಾರೆ.
ಭೂಪಾಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯದೊರೆತ ನಂತರ ಜಮ್ಮು ಕಾಶ್ಮೀರದ ಮಹಾರಾಜ ಹರಿ ಸಿಂಗ್‌ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಲಿಲ್ಲ, ಆದರೆ ಶೇಖ್‌ ಅಬ್ದುಲ್ಲ ಅವರು ಸಹಿ ಹಾಕುವಂತೆ ಹರಿ ಸಿಂಗ್‌ ಅವರನ್ನು ಒತ್ತಾಯಿಸುತ್ತಿದ್ದರು. 
ಈ ವೇಳೆಗಾಗಲೇ ಪಾಕಿಸ್ಥಾನ ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸಿ ಅದರ ಸೈನಿಕರು ಉಧಾಂಪುರದ ವರೆಗೂ ಮುನ್ನುಗ್ಗಿ ಬಂದಿದ್ದರು. ಪಾಕ್‌ ದಾಳಿಯನ್ನು ಎದುರಿಸಲು ಆಗ ಭಾರತೀಯ ಸೇನೆಯ ಬಳಿ ಯಾವುದೇ ಹೈಟೆಕ್‌ ಶಸ್ತ್ರಾಸ್ತ್ರಗಳು ಇರಲಿಲ್ಲ. ಆ ಸಂದರ್ಭದಲ್ಲಿ ನೆಹರೂ ಅವರು ಆಗಿನ ಆರ್‌ಎಸ್‌ಎಸ್‌ ಮುಖ್ಯಸ್ಥ ಗುರು ಗೋಲ್‌ವಾಲ್ಕರ್‌ ಅವರಿಗೆ ಪತ್ರ ಬರೆದು ಆರ್‌ಎಸ್‌ಎಸ್‌ ಕಾರ್ಯಕರ್ತರ ನೆರವನ್ನು ಕೋರಿದರು. ತತ್‌ಕ್ಷಣವೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಜಮ್ಮು ಕಾಶ್ಮೀರಕ್ಕೆ ಧಾವಿಸಿ ನೆರವಾದರು ಎಂದು ಉಮಾ ಭಾರತಿ ಹೇಳಿದರು. 
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ರಕ್ಷಣೆಗಾಗಿ ಕೇವಲ ಮೂರು ದಿನಗಳಲ್ಲಿ ಯುದ್ಧಕ್ಕೆ ಸಜ್ಜಾಗುವ ಸಾಮರ್ಥ್ಯವನ್ನು ಹೊಂದಿದೆ' ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಖಂಡಿಸಿದ್ದರು.
SCROLL FOR NEXT