ಸುಷ್ಮಾ ಸ್ವರಾಜ್ 66ನೇ ಜನ್ಮ ದಿನ, ಪ್ರಧಾನಿ ಮೋದಿಯಿಂದ ಶುಭಾಶಯ
ನವದೆಹಲಿ: ಪ್ರಧಾನಿ ಮೋದಿ, ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ.
ಸುಷ್ಮಾ ದೇಶದ ಅತ್ಯುತ್ತಮ ನಾಯಕಿಯಾಗಿದ್ದಾರೆ ಎಂದಿರುವ ಮೋದಿ "ಅವರು ಸ್ವತಃ ಅತ್ಯುತ್ತಮ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಒಬ್ಬ ವಿದೇಶಾಂಗ ವ್ಯವಹಾರ ಸಚಿವೆಯಾಗಿ, ಅವರು ಭಾರತದ ವಿದೇಶಾಂಗ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸಕ್ರಿಯ ಮತ್ತು ಸಹಾನುಭೂತಿಯುಳ್ಳ ಮನಸ್ಸು ಅವರ ಬಗೆಗೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ. ನಾನು ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕೆ ದೇವರಲ್ಲಿ ಪ್ರಾರ್ಥಿಸುತ್ತೇನೆ. " ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಕ್ಕೆ ಪ್ರತಿಕ್ರಯಿಸಿರುವ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು ಪ್ರಧಾನಿ ಶುಭ ಹಾರೈಕೆಗಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇದೇ ವೇಳೆ ವಿಶ್ವದಾದ್ಯಂತ ಭಾರತೀಯ ದೂತಾವಾಸಗಳ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದ ಸಚಿವರನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics