ದಲಿತ ಕಾನೂನು ವಿದ್ಯಾರ್ಥಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಅಲಹಾಬಾದ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ, ದಲಿತ ದಿಲೀಪ್ ಸರೋಜ್ ಹತ್ಯೆ ಪ್ರಕರಣದ ಪ್ರಮುಖ...
ಲಖನೌ: ಅಲಹಾಬಾದ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ, ದಲಿತ ದಿಲೀಪ್ ಸರೋಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬುಧವಾರ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಂದು ಸುಲ್ತಾನ್ ಪುರದ ರಾಜಕೀಯ ನಾಯಕ ಚಂದ್ರ ಭದ್ರ ಸಿಂಗ್ ಅವರ ನಿವಾಸದಲ್ಲಿ ಅಡಗಿದ್ದ ಪ್ರಮುಖ ವಿಜಯ್ ಶಂಕರ್ ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ಕುಲಹರಿ ಅವರು ಹೇಳಿದ್ದಾರೆ.
26 ವರ್ಷದ ಎಲ್ಎಲ್ಬಿ ವಿದ್ಯಾರ್ಥಿ ದಿಲೀಪ್ ಮೇಲೆ ನಾಲ್ವರ ತಂಡ ರೆಸ್ಟೋರೆಂಟ್ ಒಂದರ ಬಳಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ದಾಳಿಯ ನಂತರ ಕೋಮಾಗೆ ತಲುಪಿದ್ದ ದಲಿತ ವಿದ್ಯಾರ್ಥಿ ಎರಡು ದಿನಗಳ ಬಳಿಕ ಕೊನೆಯುಸಿರೆಳೆದಿದ್ದ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ.