ಗೋ-ಕಾರ್ಟ್ 
ದೇಶ

ಹರ್ಯಾಣ: ಗೋ-ಕಾರ್ಟ್ ವಾಹನದ ಚಕ್ರಕ್ಕೆ ಕೂದಲು ಸಿಲುಕಿ ಮಹಿಳೆ ಸಾವು!

ಗೋ-ಕಾರ್ಡ್ ವಾಹನದ ಚಕ್ರಕ್ಕೆ ಕೂದಲು ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಹರ್ಯಾಣದ ಅಮ್ಯೂಸ್ ಮೆಂಟ್ ಪಾರ್ಕ್ ಬಳಿ ನಡೆದಿದೆ.

ಹರ್ಯಾಣ: ಗೋ-ಕಾರ್ಡ್ ವಾಹನದ ಚಕ್ರಕ್ಕೆ ಕೂದಲು ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಹರ್ಯಾಣದ ಅಮ್ಯೂಸ್ ಮೆಂಟ್ ಪಾರ್ಕ್ ಬಳಿ ನಡೆದಿದೆ. 
ಚಕ್ರಕ್ಕೆ ಕೂದಲು ಸಿಲುಕಿದ ಪರಿಣಾಮ ಮಹಿಳೆಯ ತಲೆಬುರುಡೆ ಸೀಳಿ ಮೃತಪಟ್ಟಿದ್ದಾರೆ. ಪುನೀತ್ ಕೌರ್ (28) ಆಕೆಯ ಪತಿ ಅಮರ್ ದೀಪ್ ಸಿಂಗ್, 2 ವರ್ಷದ ಮಗ ಹಾಗೂ ಕುಟುಂಬ ಸದಸ್ಯರು ಪಿಂಜೋರ್ ನಲ್ಲಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗೆ ತೆರಳಿದ್ದರು.
ಆರು ಜನರಿಗೆ 4 ಗೋ-ಕಾರ್ಟ್ ವಾಹನವನ್ನು ಕುಟುಂಬ ಸದಸ್ಯರು ಕಾಯ್ದಿರಿಸಿದ್ದರು. ಪುನೀತ್ ಕೌರ್ ಹಾಗೂ ಆಕೆಯ ಪತಿ ಒಂದು ಕಾರ್ಟ್ ನಲ್ಲಿದ್ದರೆ 2 ವರ್ಷದ ಬಾಲಕ ಅಜ್ಜಿಯೊಂದಿಗೆ ಮತ್ತೊಂದು ಕಾರ್ಟ್ ನಲ್ಲಿದ್ದ. ಈ ವೇಳೆ ಪುನೀತ್ ಕೌರ್ ನ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿದೆ, ಹೆಲ್ಮೆಟ್ ಹಾಕಿದ್ದರೂ ಸಹ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಗೋ-ಕಾರ್ಟ್ ವೇಗವಾಗಿ ಚಲಿಸುತ್ತಿದ್ದಿದ್ದರಿಂದ ತಲೆ ಸೀಳಿದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. 
ಕೌರ್ ನ ಕುಟುಂಬಸ್ಥರು ಪಾರ್ಕ್ ಮ್ಯಾನೇಜ್ಮೆಂಟ್ ವಿರುದ್ಧ ಎಫ್ಐಆರ್ ದಾಖಲಿಸಲುವಂತೆ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!