ಮುಂಬೈ: ಸರ್ಕಾರಿ ಸಹಭಾಗಿತ್ವದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11. 300 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಿರುಸುಗೊಂಡಿದ್ದು, ಅಭರಣ ಉದ್ಯಮಿ ನೀರವ್ ಮೋದಿಗೆ ತಂಗಿದ್ದರು ಎನ್ನಲಾದ ನ್ಯೂಯಾರ್ಕ್ ನಲ್ಲಿ ಆಪಾರ್ಟಮೆಂಟ್ ನಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ನೀರವ್ ಮೋದಿ ವಿರುದ್ಧ 280 ಕೋಟಿ ರೂ. ವಂಚನೆ ಪ್ರಕರಣವನ್ನು ಬ್ಯಾಂಕ್ ಜನವರಿ 29 ರಂದು ದಾಖಲಿಸಿದೆ. ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ಆರಂಭಿಸುವ ಮೊದಲೇ ಜನವರಿ 1 ರಿಂದ ಆತ ದೇಶ ತೊರೆದಿದ್ದು, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ,
ನೀರವ್ ಮೋದಿ ಸಹೋದರ ಬೆಲ್ಜಿಯನ್ ನಾಗರಿಕ ನಿಶಾಲ್ ಕೂಡಾ ಜನವರಿ 1 ರಿಂದಲೇ ದೇಶ ತೊರೆದಿದ್ದಾನೆ. ಆತನ ಹೆಂಡತಿ ಅಮಿ ಮತ್ತು ವ್ಯವಹಾರ ಪಾಲುದಾರ ಮೆಹುಲ್ ಚೊಕ್ಸಿ ಜನವರಿ ಆರರಂದು ದೇಶ ಬಿಟ್ಟಿದ್ದಾರೆ.
2013 ರಿಂದಲೂ ನೀರವ್ ಮೋದಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 280 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಹಾಗೂ ಆತನ ಹೆಂಡತಿ, ಸಹೋದರ ಹಾಗೂ ವ್ಯವಹಾರ ಪಾಲುದಾರನ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದೆ.
ಅಲ್ಲದೇ 11.300 ಕೋಟಿ ರೂ ಅವ್ಯವಹಾರ ಪ್ರಕರಣ ಸಂಬಂಧವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಂಗಳವಾರ ಎರಡಕ್ಕೂ ಹೆಚ್ಚು ಪ್ರಕರಣವನ್ನು ಆತನ ವಿರುದ್ಧ ಸಿಬಿಐನಲ್ಲಿ ದಾಖಲಿಸಿದೆ.