ದೇಶ

ಪ್ರಧಾನಿ ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಬಣದೊಂದಿಗೆ ವಿಲೀನ: ಪನ್ನೀರ್ ಸೆಲ್ವಂ

Lingaraj Badiger
ಚೆನ್ನೈ: ಕಳೆದ ವರ್ಷ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಬಣದೊಂದಿಗೆ ವಿಲೀನವಾದ ತಮಿಳುನಾಡು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರು ಶನಿವಾರ ಹೊಸ ಬಾಂಬ್ ಸಿಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ನಾನು ನಡೆದುಕೊಂಡೆ ಎಂದು ಹೇಳಿದ್ದಾರೆ.
ನಿನ್ನೆ ಥೆಣಿಯಲ್ಲಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್ ಸೆಲ್ವಂ ಅವರು, ಕಳೆದ ವರ್ಷ ನಾನು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಪಳನಿಸ್ವಾಮಿ ಬಣದೊಂದಿಗೆ ವಿಲೀನವಾಗುವ ವಿಚಾರ ಚರ್ಚೆಗೆ ಬಂದಿತ್ತು ಎಂದಿದ್ದಾರೆ.
ಎಐಎಡಿಎಂಕೆ ಉಳಿಸಲು ನೀವು ಪಳನಿಸ್ವಾಮಿ ಜೊತೆ ಕೈಜೋಡಿಸಬೇಕು ಎಂದು ಪ್ರಧಾನಿ ಮೋದಿ ಅವರು ನನಗೆ ಸಲಹೆ ನೀಡಿದ್ದರು ಎಂದು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಹೇಳಿದ್ದಾರೆ.
ಆಗಸ್ಟ್ 2016ರಲ್ಲಿ ಎಐಎಡಿಎಂಕೆಯ ಎರಡು ಬಣಗಳು ವಿಲೀನವಾಗಿದ್ದವು. ಬಳಿಕ ಪನ್ನೀರ್ ಸೆಲ್ವಂ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
SCROLL FOR NEXT