ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11.300 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಬ್ಯಾಂಕಿನ ಸಿಬ್ಬಂದಿಯಿಂದ ಮಹತ್ವದ ಮಾಹಿತಿಗಳನ್ನು ಸಿಬಿಐ ಕಲೆಹಾಕಿದೆ,
ಕಮಿಷನ್ ಆಸೆಯಿಂದ ನಕಲಿ ಖಾತರಿ ಪತ್ರ ಒದಗಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಸಿಬಿಐ ತಿಳಿಸಿದೆ.
ಮಂಜೂರು ಮಾಡಿರುವ ಸಾಲದ ಪ್ರಮಾಣಕನ್ನುಗುಣವಾಗಿ ಕಮಿಷನ್ ಒಪ್ಪಂದ ಮಾಡಿಕೊಂಡು ನಕಲಿ ಖಾತರಿ ಪತ್ರ ಒದಗಿಸಿರುವುದಾಗಿ ಬಂಧಿಸಲ್ಟಟ್ಟಿರುವ ಬ್ಯಾಂಕ್ ಸಿಬ್ಬಂದಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಿದ್ದು, ದಾಖಲಾತಿಗಳಿಗೆ ಸಂಬಂಧಿಸಿದಂತೆ ಕಮೀಷನ್ ವಿನಿಮಯ ಎಲ್ಲರ ನಡುವೆ ನಡೆದಿದೆ ಎಂದು ಸಿಬಿಐ ಹೇಳಿದೆ.
ಆರೋಪಿ ನೀರವ್ ಮೋದಿ, ಆತನ ಸಂಬಂಧಿಕರು ಸೇರಿದಂತೆ ಇನ್ನಿತರ ಹೊರಗಡೆಯ ವ್ಯಕ್ತಿಗಳು ಹಾಗೂ ಬ್ಯಾಂಕಿನ ಅನೇಕ ಸಿಬ್ಬಂದಿಗಳು ಈ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಸಿಬಿಐ ತಿಳಿಸಿದೆ.