ನವದೆಹಲಿ: ಡೋಕ್ಲಾಮ್ ವಿವಾದದ ನಂತರ ಭಾರತದ ಸೇನಾ ಮುಖ್ಯಸ್ಥರು, ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿ ಭೇಟಿ ನೀಡಿದ್ದರು.
ಭೂತಾನ್ ನ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸೇನಾ ಮುಖ್ಯಸ್ಥರು ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿಗಳು ಡೋಕ್ಲಾಮ್ ಸೇರಿದಂತೆ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಇದೇ ವೇಳೆ ಗಡಿಗೆ ಸಂಬಂಧಿಸಿದ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದ್ದು, ಡೋಕ್ಲಾಮ್ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಬಲ ಹಾಗೂ ಮೂಲಸೌಕರ್ಯ ಅಭಿವೃದ್ಧಿ ವಿಷಯದ ಬಗ್ಗೆಯೂ ಭಾರತದ ಅಧಿಕಾರಿಗಳು ಭೂತಾನ್ ನ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಫೆ.6-7 ರಂದು ಬಿಪಿನ್ ರಾವತ್, ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭೇಟಿ ನೀಡಿದ್ದರು.