ನವದೆಹಲಿ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದೆ.
ರೇವಾದ ಖಜುಹ ಹಳ್ಳಿಯ ಶಾಲಾ ಶೌಚಾಲಯವನ್ನು ಶುಚಿಗೊಳಿಸಿರುವ ಮಿಶ್ರಾ ಅವರ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ. ಮಿಶ್ರಾ ಅವರು ಯಾವುದೇ ಸಲಕರಣೆ ಬಳಸದೇ ಬರಿಗೈಯಿಂದ ಶೌಚಾಲಯ ಶುಚಿಗೊಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಳೆದ ಹಲವು ದಿನಗಳಿಂದ ಈ ಶೌಚಾಲಯ ದುಸ್ಥಿತಿಯಲ್ಲಿತ್ತು ಎಂದು ಎಎನ್ಐ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನ ಪ್ರತಿಪಾದಿಸುತ್ತಿದ್ದ ಮಿಶ್ರಾ ಅವರು ತಮ್ಮ ಸ್ವಕ್ಷೇತ್ರದ ಬೀದಿಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು.
ಸದ್ಯ ಜನಾರ್ದನ್ ಮಿಶ್ರಾ ಅವರ ಈ ವಿಡಿಯೋಗೆ 1600 ರೀಟ್ವೀಟ್ ಗಳು ಬಂದಿದ್ದು 3 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.