ಬಿಜೆಪಿ ಸಂಸದೆ ಯಶೋಧರಾ ರಾಜೇ ಸಿಂಧಿಯಾ
ಶವಪುರಿ: ಪ್ರಧಾನಮಂತ್ರಿ ಉಜ್ವಲ ಯೋಜನೆ ಬಿಜೆಪಿಯ ಯೋಜನೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರಿಗೆ ಈ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ ಎಂದು ಬಿಜೆಪಿ ಸಂಸದೆ ಯಶೋಧರಾ ರಾಜೇ ಸಿಂಧಿಯಾ ಅವರು ಭಾನುವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಸಾರ್ವಜನಿಕ ಕಾರ್ಯಕ್ರಮವೊದರಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಪರಿಚಯಿಸಿದ್ದು ಬಿಜೆಪಿ. ಹೀಗಾಗಿ ಕಾಂಗ್ರೆಸ್'ಗೆ ಮತ ಹಾಕುವವರಿಗೆ ಈ ಯೋಜನೆಯ ಪ್ರತಿಫಲಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಈವರೆಗೂ ನಿಮಗೆ ಗ್ಯಾಸ್ ಯೋಜನೆ ತಲುಪಿಲ್ಲವೇಕೆ? ಏಕೆಂದರೆ, ಇದು ಬಿಜೆಪಿಯ ಯೋಜನೆಯಾಗಿದೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ನಿಮಗೆ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೀವು ಮತ ಹಾಕುತ್ತಿದ್ದರೆ. ಕಾಂಗ್ರೆಸ್ ಮುಖಾಂತರವಾಗಿ ನಾವೇಕೆ ನಿಮಗೆ ಗ್ಯಾಸ್ ವಿತರಣೆ ಮಾಡಬೇಕು? ನಿಮಗೆ ನಾವು ಯೋಜನೆ ಪ್ರಯೋಜನೆಗಳನ್ನು ನೀಡುವುದಿಲ್ಲ. ಬಿಜೆಪಿಗೆ ಮತ ಹಾಕಿದಿರೆ, ನಿಮಗೆ ಯೋಜನೆಯ ಪ್ರಯೋಜನ ದೊರಕುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.
ಕಡುಬಡತನದಲ್ಲಿರುವ ಮಹಿಳೆಯಲ ಕಲ್ಯಾಣಕ್ಕಾಗಿ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನ ಯೋಜನೆಯನ್ನು ಜಾರಿಗೆ ತಂದಿತ್ತು.