ನವದೆಹಲಿ: ಮಹಿಳಾ ಉದ್ಯೋಗಿಯೊಬ್ಬರನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ದೆಹಲಿ ಪೊಲೀಸರು ನಿನ್ನೆ ಹಿಂದಿ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರನ್ನು ಬಂಧಿಸಿದ್ದಾರೆ.
ಫೆಬ್ರವರಿ 13ರಂದು ದೆಹಲಿಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, 2016ರಲ್ಲಿ ಝೆನೆಟಿಕ್ಸ್ ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದಾಗ ದೆಹಲಿಯ ಇಂದಿರಾಪುರಂನಲ್ಲಿ ವಾಸಿಸುತ್ತಿದ್ದೆ. ಆಗ ಉಮೇಶ್ ಕುಮಾರ್ ಅವರ ಪರಿಚಯವಾಯಿತು. ಕಳೆದ ವರ್ಷ ಜೂನ್ ನಲ್ಲಿ ತನ್ನ ನಿವಾಸಕ್ಕೆ ಉಮೇಶ್ ಕುಮಾರ್ ತನ್ನನ್ನು ಬರಲು ಹೇಳಿದರು. ಮದುವೆ ಮಾಡಿಕೊಳ್ಳುವ ನೆಪದಲ್ಲಿ ತಮ್ಮ ಜೊತೆ ದೈಹಿಕ ಸಂಬಂಧ ಬೆಳೆಸಿದರು. ನಂತರ ಆಗಸ್ಟ್ ತಿಂಗಳಲ್ಲಿ ಕ್ಲಾರಿಡ್ಜ್ ಹೊಟೇಲ್ ಗೆ ಕರೆದು ತನ್ನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದರು. ನಂತರ ಉಮೇಶ್ ಅವರಿಗೆ ಮದುವೆಯಾಗಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.
ಉಮೇಶ್ ಅವರು ಹೊಟೇಲ್ ನಲ್ಲಿ ಸಂತ್ರಸ್ತೆ ಹೇಳಿದ ದಿನ ಕೋಣೆ ಬುಕ್ ಮಾಡಿದ್ದರು ಎಂದು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಮತ್ತು 506ರಡಿಯಲ್ಲಿ ಮತ್ತು ಕ್ರಿಮಿನಲ್ ಪ್ರಕ್ರಿಯೆ ಸೆಕ್ಷನ್ 164ರಡಿಯಲ್ಲಿ ಉಮೇಶ್ ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos