ದೇಶ

ಮಾರ್ಚ್ 8ರಂದು ಅಗ್ಗ ದರದ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಯೋಜನೆಗೆ 'ಮಹಾ' ಸರ್ಕಾರ ಚಾಲನೆ

Sumana Upadhyaya
ಮುಂಬೈ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಅಸ್ಮಿತಾ ಯೋಜನೆಯನ್ನು ಜಾರಿಗೆ ತರಲಿದ್ದು ಇದರಡಿ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ನ್ನು ಪ್ರತಿ ಪ್ಯಾಕೆಟ್ ಗೆ 5 ರೂಪಾಯಿ, ಗ್ರಾಮೀಣ ಮಹಿಳೆಯರಿಗೆ 24 ಮತ್ತು 29 ರೂಪಾಯಿಗಳ ಸಬ್ಸಿಡಿ ದರದಲ್ಲಿ ಮಹಾರಾಷ್ಟ್ರ ಸರ್ಕಾರ ನೀಡಲಿದೆ.
ಈ ವಿಷಯವನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಯೋಜನೆ ಆರಂಭ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಉಪಸ್ಥಿತರಿರುತ್ತಾರೆ. ಅಕ್ಷಯ್ ಕುಮಾರ್ ಅವರ ಇತ್ತೀಚೆಗೆ ತೆರೆಕಂಡ ಪ್ಯಾಡ್ ಮಾನ್ ಚಿತ್ರ ಗ್ರಾಮೀಣ ಮಹಿಳೆಯರಲ್ಲಿ ಋತುಚಕ್ರದ ಬಗ್ಗೆ ಶುಚಿತ್ವ ಮತ್ತು ಅರಿವು ಮೂಡಿಸುವ ಚಿತ್ರಕಥೆಯಾಗಿದೆ.
SCROLL FOR NEXT