ಮತಗಟ್ಟೆಯ ಮುಂದೆ ನಿಂತಿರುವ ಜನ 
ದೇಶ

ತ್ರಿಪುರಾ ಚುನಾವಣೆ: 60 ವಿಧಾನಸಭೆ ಕ್ಷೇತ್ರಗಳ ಪೈಕಿ 59ರಲ್ಲಿ ಮತದಾನ ಪ್ರಗತಿಯಲ್ಲಿ

ತ್ರಿಪುರಾ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮತದಾರರು ಮತಗಟ್ಟೆಯ ಎದುರು ತಮ್ಮ ಸಾಂವಿಧಾನಿಕ ಹಕ್ಕು...

ತ್ರಿಪುರಾ: ತ್ರಿಪುರಾ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.
ಮತದಾರರು ಮತಗಟ್ಟೆಯ ಎದುರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ. 
ಇಂದು ಸಾಯಂಕಾಲ 4 ಗಂಟೆಯವರೆಗೆ ರಾಜ್ಯದ 3,214 ಮತಗಟ್ಟೆಗಳಲ್ಲಿ ಜನರು ಮತದಾನ ಮಾಡುತ್ತಿದ್ದಾರೆ. ಸಿಪಿಎಂ ಅಭ್ಯರ್ಥಿ ರಮೇಂದ್ರ ನಾರಾಯಣ್ ದೆಬ್ಬರ್ಮ ಅವರ ನಿಧನದಿಂದ ಚಾರಿಲಮ್ ಕ್ಷೇತ್ರದಲ್ಲಿ ಇಂದಿನ ಮತದಾನವನ್ನು ಮುಂದೂಡಲಾಗಿದೆ. ಮಾರ್ಚ್ 12ರಂದು ಇಲ್ಲಿ ಮತದಾನ ನಡೆಯಲಿದೆ.
ಬಹುನಿರೀಕ್ಷಿತ ಈಶಾನ್ಯ ರಾಜ್ಯವಾದ ತ್ರಿಪುರಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ, ಆಡಳಿತಾರೂಢ ಎಡರಂಗದ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಇಂದಿನ ಚುನಾವಣೆಯಲ್ಲಿ 23 ಮಹಿಳೆಯರು ಸೇರಿದಂತೆ 292 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ 25 ವರ್ಷಗಳಿಂದ ಇಲ್ಲಿ ಆಳ್ವಿಕೆ ನಡೆಸುತ್ತಿರುವ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮಾಡುತ್ತಿವೆ.
ಬಿಜೆಪಿ 51 ಸ್ಥಾನಗಳಲ್ಲಿ ಹಾಗೂ ಅದು ಮೈತ್ರಿ ಮಾಡಿಕೊಂಡಿರುವ ಐಪಿಎಫ್ ಟಿ 9 ಸ್ಥಾನಗಳಲ್ಲಿ, ಸಿಪಿಎಂ 57 ಸ್ಥಾನಗಳಲ್ಲಿ ಹಾಗೂ ಅದರ ಮೈತ್ರಿ ಪಕ್ಷಗಳಿಗೆ 2 ಸೀಟು ಬಿಟ್ಟುಕೊಟ್ಟರೆ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಮೇಘಾಲಯ ಮತ್ತು ನಾಗಲ್ಯಾಂಡ್ ಜೊತೆಗೆ ತ್ರಿಪುರಾ ಚುನಾವಣೆ ಫಲಿತಾಂಶ ಮಾರ್ಚ್ 3ರಂದು ಘೋಷಣೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!