ದೇಶ

Delimitation Bill:'ಮತಗಳ್ಳತನ ಆಯ್ತು, ಈಗ ಸೀಟುಗಳ ಕಳ್ಳತನ': ಬಿಜೆಪಿಗೆ ಅನುಕೂಲವಾಗುವಂತೆ ಕ್ಷೇತ್ರಗಳ ಗಡಿ ಮರು ನಿಗದಿ, ತೆರಿಗೆ ಹೊರೆ- CJP

Delimitation Bill:'ಮತಗಳ್ಳತನ ಆಯ್ತು, ಈಗ ಸೀಟುಗಳ ಕಳ್ಳತನ': ಬಿಜೆಪಿಗೆ ಅನುಕೂಲವಾಗುವಂತೆ ಕ್ಷೇತ್ರಗಳ ಗಡಿ ಮರು ನಿಗದಿ, ತೆರಿಗೆ ಹೊರೆ- CJP
ಸೌರವ್ ದಾಸ್ ಮತ್ತಿತರರು
Published On :

ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ' (CJP) ಕೇಂದ್ರ ಸರ್ಕಾರದ ಪ್ರಸ್ತಾವಿತ 'ಕ್ಷೇತ್ರ ಮರುವಿಂಗಡಣಾ ಮಸೂದೆ'ಯನ್ನು (Delimitation Bill) ವಿರೋಧಿಸಿದೆ. ಈಗಾಗಲೇ ಮತಗಳ್ಳತನ ಮಾಡಿರುವ ನರೇಂದ್ರ ಮೋದಿ ಸರ್ಕಾರ ಈಗ ಸೀಟುಗಳನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ಪಕ್ಷದ ಸಹ-ಸಂಚಾಲಕ ಸೌರವ್ ದಾಸ್ ಆರೋಪಿಸಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಸ್, ಮತಗಳ ಕಳ್ಳತನ"ದಿಂದ ತೃಪ್ತಿ ಹೊಂದದ ಸರ್ಕಾರ, ಈಗ "ಸ್ಥಾನಗಳ ಕಳ್ಳತನ"ದತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯಿಂದ ಉಂಟಾಗಬಹುದಾದ ದೊಡ್ಡ ಅಪಾಯದ ಬಗ್ಗೆಯೂ ಅವರು ಎಚ್ಚರಿಸಿದರು. ಇದು 'Gerrymandering'ಗೆ (ರಾಜಕೀಯ ಲಾಭಕ್ಕಾಗಿ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ತಮಗೆ ಅನುಕೂಲವಾಗುವಂತೆ ಬದಲಾಯಿಸುವುದು) ದಾರಿ ಮಾಡಿಕೊಡಬಹುದು. ಇತ್ತೀಚಿನ ವಿಡಿಯೋಗಳು ಮತ್ತು ವಿವರಣಾತ್ಮಕ ವರದಿಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿರುವ ಈ ಪರಿಕಲ್ಪನೆಯನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ 'ಕ್ಷೇತ್ರ ಮರುವಿಂಗಡಣಾ ಆಯೋಗ'ಕ್ಕೆ (Delimitation Commission) ಇರುತ್ತದೆ ಮತ್ತು ಈ ಆಯೋಗವನ್ನು ಸರ್ಕಾರವೇ ನೇಮಿಸುತ್ತದೆ. ಹೀಗಾಗಿ, ಕೇವಲ ಒಂದು ರಾಜಕೀಯ ಪಕ್ಷಕ್ಕೆ ಅಂದರೆ ಬಿಜೆಪಿಗೆ—ಅನುಕೂಲವಾಗುವ ರೀತಿಯಲ್ಲಿ ಕ್ಷೇತ್ರಗಳ ಗಡಿಗಳನ್ನು ರೂಪಿಸಬಹುದು ಎಂದು ಅವರು ಆರೋಪಿಸಿದರು.'ಗೆರಿಮ್ಯಾಂಡರಿಂಗ್' ಪದ್ಧತಿಯು ಹಲವು ದೇಶಗಳಲ್ಲಿ ಚಾಲ್ತಿಯಲ್ಲಿದೆ ಮತ್ತು ಭಾರತದಲ್ಲೂ ಇದನ್ನು ಕಾಣಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಲವು ಚುನಾವಣಾ ಕ್ಷೇತ್ರಗಳ ನಕ್ಷೆಗಳನ್ನು ಪ್ರದರ್ಶಿಸಿ, ಅವುಗಳ ಗಡಿಗಳನ್ನು ತಮಗೆ ಬೇಕಾದಂತೆ ಬದಲಾಯಿಸಲಾಗಿದೆ (manipulated) ಎಂದು ಪ್ರತಿಪಾದಿಸಿದರು. ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ಉಲ್ಲೇಖಿಸಿದ ದಾಸ್, ಅಲ್ಲಿ ಹಲವು ಕ್ಷೇತ್ರಗಳನ್ನು ವಿಭಜಿಸಿದ ರೀತಿ ನೇರವಾಗಿ ಬಿಜೆಪಿಗೆ ಲಾಭ ತಂದುಕೊಡುವಂತಿದೆ ಎಂದು ಆರೋಪಿಸಿದರು.

ಲೋಕಸಭಾ ಸ್ಥಾನಗಳ ಹೆಚ್ಚಳದ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟವನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಟೀಕಿಸಿದ್ದು, ಇದು ತೆರಿಗೆದಾರರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸರ್ಕಾರ 68 ಸದಸ್ಯರನ್ನು ಒಳಗೊಂಡ ಸಚಿವ ಸಂಪುಟಕ್ಕಾಗಿ ವಾರ್ಷಿಕ 620 ಕೋಟಿ ರೂ. ವೆಚ್ಚ ಮಾಡುತ್ತಿದೆ. ಅಂದರೆ ಒಬ್ಬ ಸಚಿವರಿಗೆ ಸರಾಸರಿ 9.1 ಕೋಟಿ ವೆಚ್ಚವಾಗುತ್ತಿದೆ. ಪ್ರಸ್ತಾವಿತ ಕ್ಷೇತ್ರ ಮರು ವಿಂಗಡಣೆಯಿಂದ ಸಚಿವ ಸಂಪುಟದ ಗರಿಷ್ಠ ಬಲ 81 ರಿಂದ 122ಕ್ಕೆ ಏರಿಕೆಯಾಗಬಹುದು. ಇದರಿಂದ 41 ಹೆಚ್ಚುವರಿ ಸಚಿವರಿಗೆ ಅವಕಾಶ ದೊರೆತು, ವಾರ್ಷಿಕ ಅಂದಾಜು 374 ಕೋಟಿ ಹೆಚ್ಚುವರಿ ಹೊರೆಬೀಳಲಿದೆ ಎಂದು ಹೇಳಿದ್ದಾರೆ.

ಲೋಕಸಭೆ ಹಾಗೂ ಸಚಿವ ಸಂಪುಟದ ವಿಸ್ತರಣೆಯಿಂದ ಹೆಚ್ಚಿನ ರಾಜಕಾರಣಿಗಳು ತೆರಿಗೆದಾರರ ಹಣವನ್ನು ತಿಂದು ಬದುಕುತ್ತಾರೆಯೇ ಹೊರತು ಜನರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ದೀಪ್ಕೆ ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.