ಸಾಂದರ್ಭಿಕ ಚಿತ್ರ 
ದೇಶ

ಮಾಲೀಕನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕೆ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ...!

ಮಾಲೀಕನ ಪತ್ನಿಯೊಂದಿಗೆ ಓಡಿ ಹೋದ ಚಾಲಕನೊಬ್ಬನಿಗೆ ಥಳಿಸಿ, ಆತನ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ ನೀಡಿರುವ ಅಮಾನವೀಯ ಕೃತ್ಯವೊಂದು ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ...

ಪಾಟ್ನಾ; ಮಾಲೀಕನ ಪತ್ನಿಯೊಂದಿಗೆ ಓಡಿ ಹೋದ ಚಾಲಕನೊಬ್ಬನಿಗೆ ಥಳಿಸಿ, ಆತನ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ ನೀಡಿರುವ ಅಮಾನವೀಯ ಕೃತ್ಯವೊಂದು ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ. 
ಗೌತಮ್ ಕುಮಾರ್ (30) ಸಂತ್ರಸ್ತ ವ್ಯಕ್ತಿಯಾಗಿದ್ದಾನೆ. ಬರೌನಿ ಎಂಬ ಗ್ರಾಮದಲ್ಲಿ ಸಂತ್ರಸ್ತ ವ್ಯಕ್ತಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಟ್ರ್ಯಾಕ್ಟರ್ ಮಾಲೀನಕ ಪತ್ನಿಯೊಂದಿಗೆ ಸಂಬಂಧ ಬೆಳೆದಿದೆ. ಇದರಂತೆ ಇಬ್ಬರೂ ಫೆ.6 ರಂದು ಊರು ಬಿಟ್ಟು ಹೋಗಿದ್ದಾರೆ. 
ಬಳಿಕ ಟ್ರ್ಯಾಕ್ಟರ್ ಮಾಲೀಕ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ಮಹಿಳೆ ಮತ್ತೆ ಊರಿಗೆ ಬಂದಿದ್ದಾಳೆ. ಬಳಿಕ ತೆಘ್ರಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಈ ವೇಳೆ ಸ್ವಇಚ್ಛೆಯಿಂದಲೇ ನಾನು ಮನೆಬಿಟ್ಟು ಹೋಗಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ಮಹಿಳೆಗೆ ತನ್ನ ಪತಿಯ ಮನೆಗೆ ತೆರಳುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶವನ್ನು ಮಹಿಳೆ ಸಮ್ಮತಿಸಿದ್ದಾಳೆ. 
ಇದಾದ ಕೆಲವೇ ಗಂಟೆಗಳಲ್ಲಿ ಮಹಿಳೆಯ ಸಂಬಂಧಿಯೊಬ್ಬ ಟ್ರ್ಯಾಕ್ಟರ್ ಚಾಲಕ ಗೌತಮ್ ಬಳಿ ಮಹಿಳೆ ನಿನ್ನೊಂದಿಗೆ ವಾಸವಿರಲು ಇಚ್ಛಿಸುತ್ತಿದ್ದಾಳೆ. ಪೊಲೀಸ್ ಠಾಣೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗು ಎಂದು ಸುಳ್ಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಇಬ್ಬರೂ ಒಟ್ಟಿಗೆ ಬರುತ್ತಿದ್ದ ಸಂದರ್ಭದಲ್ಲಿ 20 ಮಂದಿಯಿದ್ದ ತಂಡವೊಂದು ಗೌತಮ್ ಗೆ ಥಳಿಸಿದ್ದಾರೆ. ಅಲ್ಲದೆ ಆ್ಯಸಿಡ್ ತುಂಬಿದ್ದ ಸಿರಿಂಜ್ ನ್ನು ಆತನ ಕಣ್ಣಿಗೆ ಇಂಜೆಕ್ಟ್ ಮಾಡಿದ್ದಾರೆ. ಈ ವೇಳೆ ಅತೀವ್ರ ಉರಿ ಹಾಗೂ ನೋವಿನಿಂದ ಗೌತಮ್ ಪ್ರಜ್ಞೆ ಕಳೆದುಕೊಕಂಡಿದ್ದಾನೆ. 
ಇದನ್ನು ನೋಡಿದ ದುಷ್ಕರ್ಮಿಗಳು ಗೌತಮ್ ಮೃತಪಟ್ಟಿದ್ದಾನೆಂದು ತಿಳಿದು, ಆತನನ್ನು ರಸ್ತೆಯ ಮಧ್ಯೆ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಗೌತಮ್ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದು, ಬೇಗುಸರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 
ಪ್ರಕರಣ ಸಂಬಂಧ ಮಹಿಳೆಯ ಪತಿ ದಯಾರಾಮ್ ಸಿಂಗ್'ನನ್ನು ಬಂಧನಕ್ಕೊಳಪಡಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

PSL ನಲ್ಲಿ ಮತ್ತೊಂದು ಹೈಡ್ರಾಮಾ: ಇದ್ಯಾವ್ ಸೀಮೆ ಬೌಲಿಂಗ್?.. ಮೈದಾನದಲ್ಲೇ Daryl Mitchell vs Usman Tariq ಜಟಾಪಟಿ, ಇಷ್ಟಕ್ಕೂ ಆಗಿದ್ದೇನು?

SCROLL FOR NEXT