ಗೋರಖ್ ಪುರ: ಉತ್ತರ ಪ್ರದೇಶ ಪೊಲೀಸರು ಆಡಳಿತರೂಢ ಬಿಜೆಪಿ ಸಂಸದ ಹಾಗೂ ಇತರೆ 27 ಮಂದಿ ವಿರುದ್ಧ ದಂಗೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಇತರೆ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಗೋರಖ್ ಪುರದಲ್ಲಿನ ಭೂ ವಿವಾದಕ್ಕೆ ಸಂಬಂಧಿಸಿದಂತೆ ಬನ್ಸ್ ಗಾಂವ ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್ ಹಾಗೂ ಇತರರ ವಿರುದ್ಧ ಕಳೆದ ರಾತ್ರಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಂಟೋನ್ ಮೆಂಟ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
ಸಂಸದ ಪಾಸ್ವಾನ್ ಕಡೆಯವರು ನಿನ್ನೆ ಮಧ್ಯಾಹ್ನ ನಿರ್ಮಾಣ ಹಂತದ ಗೋಡೆ ಕೆಡವಿದ್ದಾರೆ ಎಂದು ಆರೋಪಿಸಿ ಸಂಸದರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಲಾಗಿತ್ತು.
ಪಾಸ್ವಾನ್ ಅವರು ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಹೇಳಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧೀಕ್ಷಕ ಸತ್ಯಾರ್ಥ್ ಅನಿರುದ್ಧ್ ಪಂಕಜ್ ಅವರು, ಪಾಸ್ವಾನ್ ಬೆಂಬಲಿಗರು ಗೋಡೆ ಕೆಡವಿದ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಇದೆ. ಹೀಗಾಗಿ ಅವರ ಸಂಸದ ಕಮಲೇಶ್ ಪಾಸ್ವಾನ್ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics