ದೇಶ

ಪಾಕ್ ಕಲಾವಿದರ ವಿರುದ್ಧ ಬಾಲಿವುಡ್ ನಿಲುವು ಕೈಗೊಳ್ಳಬೇಕು: ಸಚಿವ ಬಾಬುಲ್ ಸುಪ್ರಿಯೋ

Manjula VN
ಬರ್ಧಾಮನ್ (ಪಶ್ಚಿಮ ಬಂಗಾಳ): ಜಮ್ಮು ಮತ್ತು ಕಾಶ್ಮೀರದ  ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ದೇಶದಲ್ಲಿಂದು ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಕಲಾವಿದರ ವಿರುದ್ಧ ಈಗಲಾದರೂ ಬಾಲಿವುಡ್ ನಿಲುವು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಸೋಮವಾರ ಹೇಳಿದ್ದಾರೆ. 
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಾಲಿವುಡ್ ಒಂದು ದೊಡ್ಡ ಉದ್ಯಮವಾಗಿದ್ದು, ಜನರ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಸಿನಿಮಾ ನಟ-ನಟಿಯರು ನಿಲುವು ಕೈಗೊಂಡರೆ ಅದು ಭಾರತಕ್ಕೆ ಉತ್ತಮವಾಗುತ್ತದೆ. ಭಾರತದಲ್ಲಿ ಕೆಲಸ ಮಾಡಲು ಪಾಕಿಸ್ತಾನದ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬಾರದು ಎಂದು ತಿಳಿಸಿದ್ದಾರೆ. 
ಪಾಕಿಸ್ತಾನ ಭಯೋತ್ಪಾದಕ ದೇಶವಾಗಿದ್ದು, ಗಡಿಯಲ್ಲಿ ನಮ್ಮ ಯೋಧರನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದೆ. ಪ್ರತೀನಿತ್ಯ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಎದುರಾಗಿದ್ದು, ಈಗಲಾದಲೂ ಬಾಲಿವುಡ್ ಪಾಕಿಸ್ತಾನ ಕಲಾವಿದರ ವಿರುದ್ಧ ನಿಲುವು ಕೈಗೊಳ್ಳಬೇಕಿದೆ ಎಂದಿದ್ದಾರೆ. 
SCROLL FOR NEXT