ಮನೋಹರ್ ಪರಿಕ್ಕರ್ 
ದೇಶ

ಪರಿಕ್ಕರ್ ಆರೋಗ್ಯದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನಿಗೆ ಗೋವಾ ವಿಧಾನಸಭೆ ಪ್ರವೇಶಕ್ಕೆ ನಿಷೇಧ

ಗೋವಾ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಬಳಿಕ ಅದನ್ನು ಹಿಂಪಡೆದಿದ್ದ ಪತ್ರಕರ್ತನಿಗೆ ಸೋಮವಾರ....

ಪಣಜಿ: ಗೋವಾ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಬಳಿಕ ಅದನ್ನು ಹಿಂಪಡೆದಿದ್ದ ಪತ್ರಕರ್ತನಿಗೆ ಸೋಮವಾರ ಗೋವಾ ವಿಧಾನಸಭೆ ಪ್ರವೇಶ ನಿಷೇಧಿಸಲಾಗಿದೆ.
ಗೋವಾದಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಅದರ ವರದಿ ಮಾಡಲು ಆಗಮಿಸಿದ್ದ ಗೋವಾ ಜಂಕ್ಷನ್.ಕಾಮ್ ಪತ್ರಕರ್ತ ಹರಿಶ್ ವೊಲ್ವೋಕರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. 
ವಿಧಾನಸಭೆ ಪ್ರವೇಶಿಸಲು ಅಗತ್ಯವಾದ ಭದ್ರತಾ ಪಾಸ್ ನನ್ನ ಬಳಿ ಇದ್ದರೂ ವಿಧಾನಸಭೆ ಆವರದಣ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ವೊಲ್ವೋಕರ್ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ಭದ್ರತಾ ಅಧಿಕಾರಿ ಆತ್ಮರಾಮ್ ಬರ್ವೆ ಅವರು, ಈ ಕುರಿತು ಸ್ಪೀಕರ್ ಪ್ರಮೋದ್ ಸಾವಂತ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಕಳೆದ ಶನಿವಾರ ಗೋವಾ ಸಿಎಂ ಮನೋಹರ್ ಪರಿಕ್ಕರ್ ತೀವ್ರ ಅನಾರೋಗ್ಯಕ್ಕಿಡಾಗಿದ್ದಾರೆ ಎಂದು ವರದಿ ಮಾಡಿತ್ತು. ಬಳಿಕ ಆ ವರದಿಯನ್ನು ಹಿಂಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು