ಪಣಜಿ: ಪ್ಯಾಂಕ್ರಿಯಾಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಅಗತ್ಯ ಬಿದ್ದಿರೆ ಹೆಚ್ಚಿನಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯುಲಾಗುವುದು ಎಂದು ಗೋವಾ ಉಪ ಸಭಾಪತಿ ಹಾಗೂ ಬಿಜೆಪಿ ಶಾಸಕ ಮೈಕಲ್ ಲೋಬೋ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಬೋ ಅವರು, ನಮಗೆ ಪರಿಕ್ಕರ್ ಅವರು. ಬೇಕು. ಅವರಿಗಾಗಿ ನಾವು ಏನುಬೇಕಾದರೂ ಮಾಡಲು ಸಿದ್ಧ. ಸಿಎಂ ಆರೋಗ್ಯ ಸುಧಾರಣೆ ಮುಖ್ಯ. ಅದಕ್ಕಾಗಿ ಅವಶ್ಯವಿದ್ದಲ್ಲಿ ಅವರನ್ನು ಅಮೆರಿಕಾಕ್ಕೂ ಕರೆದೊಯ್ಯುತ್ತೇವೆ ಎಂದರು.
ಪ್ಯಾಂಕ್ರಿಯಾಸ್ ಕ್ಯಾನ್ಸರ್ ಲಕ್ಷಣಗಳು ಹಾಗೂ ನೋವು ಕಾಣಿಸಿಕೊಂಡಿದ್ದರಿಂದ ಮನೋಹರ್ ಪರಿಕ್ಕರ್ಅವರನ್ನು ಕಳೆದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಮುಖ್ಯಮಂತ್ರಿ ಪರಿಕ್ಕರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಗೋವಾ ಬಜೆಟ್ ಅಧಿವೇಶನವನ್ನು ಕೇವಲ ನಾಲ್ಕು ದಿನಕ್ಕೆ ಮೊಟಕುಗೊಳಿಸಲಾಗಿದೆ.
ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಅವರು ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ವ್ಯವಹಾರ ಸಲಹಾ ಸಮಿತಿ(ಬಿಎಸಿ) ಸಭೆ ನಡೆಸಿದ ಸ್ಪೀಕರ್ ಪ್ರಮೋದ್ ಸಾವಂತ್ ಅವರು, ಅಧಿವೇಶನದ ಕಡೆಯ ದಿನವಾದ ಫೆ.22ಕ್ಕೆ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.