ವಲಸೆ ನೌಕರ ಮೊಹಮ್ಮದ್ ಅಫ್ರಾಜುಲ್ ನ್ನು ಹತ್ಯೆ ಮಾಡಿದ್ದಾಗಿ ಪಶ್ಚಾತ್ತಾಪ ಇಲ್ಲ ಎಂದು ರಾಜಸ್ಥಾನದ ರಾಜ್ಸಾಮಂದ್ ಜಿಲ್ಲೆಯ ಆರೋಪಿ ಶಂಭುಲಾಲ್ ಹೇಳಿದ್ದಾನೆ.
ಜೋಧ್ ಪುರದ ಜೈಲಿನಿಂದಲೇ ವಿಡಿಯೋ ಮಾಡಿರುವ ಶಂಭುಲಾಲ್, ಅಫ್ರಾಜುಲ್ ನ್ನು ದಹಿಸಿ ಹತ್ಯೆ ಮಾಡಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪವೂ ಇಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಎನ್ ಡಿಟಿವಿ ಈ ಬಗ್ಗೆ ವರದಿ ಪ್ರಕಟಿಸಿದ್ದು, ಅಫ್ರಾಜುಲ್ ನ್ನು ಹತ್ಯೆ ಮಾಡುವುದೇ ತಮ್ಮ ಉದ್ದೇಶವಾಗಿತ್ತು ಎಂದು ಹೇಳಿರುವ ಅಫ್ರಾಜುಲ್, ಅಲ್ಪಸಂಖ್ಯಾತರ ಬಗ್ಗೆಯೂ ದ್ವೇಷ ಹುಟ್ಟುವ ರೀತಿಯಲ್ಲಿ ಮಾತನಾಡಿದ್ದಾನೆ.
ಆರೋಪಿ ಜೈಲಿನ ಒಳಗಿನಿಂದಲೇ ವಿಡಿಯೋ ಮಾಡಿರುವುದು ಜೈಲಿನ ಭದ್ರತೆ ಕುರಿತು ಪ್ರಶ್ನೆಗಳನ್ನು ಮೂಡಿಸುತ್ತಿದೆ.