ವಿಕ್ರಮ್ ಕೊಠಾರಿ 
ದೇಶ

ರೋಟೋಮ್ಯಾಕ್ ವಂಚನೆ ಪ್ರಕರಣ; ಸಾಲ ಮರುಪಾವತಿ ಮಾಡಿಲ್ಲ ಅಷ್ಟೇ: ಕೊಠಾರಿ ವಕೀಲ

ಬ್ಯಾಂಕ್ ಗಳಿಗೆ 800 ಕೋಟಿ ರುಪಾಯಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ...

ಕಾನ್ಪುರ: ಬ್ಯಾಂಕ್ ಗಳಿಗೆ 800 ಕೋಟಿ ರುಪಾಯಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ರೋಟೋಮ್ಯಾಕ್  ಪೆನ್ ಸಂಸ್ಥೆಯ ಮಾಲೀಕ  ವಿಕ್ರಮ ಕೊಠಾರಿ ಅವರು ಯಾವುದೇ ವಂಚನೆ ಮಾಡಿಲ್ಲ. ಇದು ಸಾಲ ಮರುಪಾವತಿ ಮಾಡದ ಪ್ರಕರಣ ಅಷ್ಟೆ ಎಂದು ಅವಕ ವಕೀಲ ಶರದ್ ಕುಮಾರ್ ಬಿರ್ಲಾ ಅವರು ಸೋಮವಾರ ಹೇಳಿದ್ದಾರೆ.
ವ್ಯವಹಾರಕ್ಕಾಗಿ ನನ್ನ ಕಕ್ಷಿದಾರ ಬ್ಯಾಂಕ್ ಗಳಿಂದ ಲಂಚ ಪಡೆದಿದ್ದಾರೆ. ಅದರಲ್ಲಿ ಯಾವುದೇ ವಂಚನೆ ಎಸಗಿಲ್ಲ. ಇದು ಕೇವಲ ಸಾಲ ತೀರಿಸದ ಪ್ರಕರಣ. ಈ ಬಗ್ಗೆ ನಾನು ಇನ್ನು ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ ಎಂದು ಬಿರ್ಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಇನ್ನು ರೋಟೋಮ್ಯಾಕ್ ಸಂಸ್ಥೆಯ ಮಾಲೀಕರು ವಿವಿಧ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರು. ಸಾಲ ಮಾಡಿ ತೀರಸದೇ ನಾಪತ್ತೆಯಾಗಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಕೊಠಾರಿ  ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೊಠಾರಿ, ತಾವು ದೇಶ  ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸಂಸ್ಥೆಯ ವಕ್ತಾರರೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಕ್ರಮ್ ಕೊಠಾರಿ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳೆಲ್ಲಾ ಸುಳ್ಳು. ತಾವು ದೇಶ  ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!

ಬೆಂಗಳೂರು: ತಾಜ್‌ ಹೋಟೆಲ್‌ನಲ್ಲಿ ಘೋರ ಕೃತ್ಯ; ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆಗೈದು ತಂದೆ ಆತ್ಮಹತ್ಯೆಗೆ ಯತ್ನ!

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್; ಮಧು ಬಂಗಾರಪ್ಪ ಜೊತೆ ಪಿಸುಮಾತು ವಿವಾದ; ಬಿ.ವೈ ವಿಜಯೇಂದ್ರ ಸ್ಪಷ್ಟನೆ