ಸಂಗ್ರಹ ಚಿತ್ರ 
ದೇಶ

2ಜಿ, ಬೋಫೋರ್ಸ್ ನಂತೆ ಪಿಎನ್ ಬಿ ವಂಚನೆ ಪ್ರಕರಣ ಕೂಡ ಕುಸಿಯಲಿದೆ: ನೀರವ್ ಮೋದಿ ಪರ ವಕೀಲ

2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣ ಕೂಡ ಬೀಳಲಿದ್ದು, ತನಿಖಾ ಸಂಸ್ಥೆಗಳು ಹೊರಿಸಿರುವ ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

ನವದೆಹಲಿ: 2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣ ಕೂಡ ಬೀಳಲಿದ್ದು, ತನಿಖಾ ಸಂಸ್ಥೆಗಳು ಹೊರಿಸಿರುವ ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನೀರವ್ ಮೋದಿ  ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನೀರವ್ ಮೋದಿ ವಿರುದ್ಧ ತನಿಖಾ ಸಂಸ್ಥೆಗಳು ಹೊರಿಸಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು,  2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣವನ್ನು ಕೂಡ  ಸಾಬೀತು ಮಾಡಲು ಸಾಧ್ಯವಿಲ್ಲ. ನನಗೆ ಭರವಸೆ ಇದ್ದು ನೀರವ್ ಮೋದಿ ವಿರುದ್ಧದ ಆರೋಪಗಳು ಸುಳ್ಳಾಗಲಿದ್ದು, ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. 
ನಕಲಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸಾಲಪತ್ರದ ಮೂಲಕ ನೀರವ್ ಮೋದಿ ಇತರೆ ಬ್ಯಾಂಕ್ ಗಳಿಂದ ಸುಮಾರು 11, 300 ರೂಕೋಟಿ ರೂಗಳನ್ನು ಸಾಲಪಡೆದು ವಂಚಿಸಿದ್ದರು ಎಂಬ ಗಂಭೀರ  ಆರೋಪ ಅವರ ಮೇಲಿದೆ. ಪ್ರಕರಣ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೇ ಪ್ರಕರಣದಲ್ಲಿ ಗೀತಾಂಜಲಿ ಜೆಮ್ಸ್ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ಅವರನ್ನೂ ಕೂಡ  ಪ್ರಮುಖ ಆರೋಪಿಯನ್ನಾಗಿಸಲಾಗಿದೆ. 
ಈಗಾಗಲೇ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರಿಗೆ ಸಂಬಂಧಿಸಿದ ದೇಶದ ವಿವಿಧೆಡೆ ಇರುವ ಆಸ್ತಿ, ಕಚೇರಿ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ  ಚೋಕ್ಸಿ, ನೀರವ್ ಮೋದಿ ಕುಟುಂಬಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!