ದೇಶ

ಆತಂಕ ಬೇಡ, ಮೊಬೈಲ್ ಸಂಖ್ಯೆ 13 ಡಿಜಿಟ್ ಗೆ ಬದಲಾಗುವುದಿಲ್ಲ!

Vishwanath S
ನವದೆಹಲಿ: ಜುಲೈ 1ರಿಂದ ಮೊಬೈಲ್ ಸಂಖ್ಯೆಗಳು 13 ಡಿಜಿಟ್ ಗೆ ಬದಲಾಗುತ್ತವೆ ಎಂಬ ವದಂತಿಗಳಿಗೆ ಗ್ರಾಹಕರ ಆತಂಕ ಪಡುವ ಅಗತ್ಯವಿಲ್ಲ. ಮೊಬೈಲ್ ಸಂಖ್ಯೆಗಳು ಈಗ ಇರುವಂತೆಯೇ 10 ಅಂಕಿಗಳಾಗಿಯೇ ಮುಂದುವರಿಯುತ್ತದೆ. 
ಟೆಲಿಂಕಾ ಇಲಾಖೆಯ ಈ ಆದೇಶವು ಕೇವಲ ಎಂ2ಎಂ ಮೆಷಿನ್ ಟು ಮೆಷಿನ್ ಗಳಿಗೆ ಮಾತ್ರ ಸೀಮಿತವಾಗಿದೆ. ಎಂ2ಎಂ ಸಂಖ್ಯೆಗಳು ಸ್ವೈಪಿಂಗ್ ಯಂತ್ರಗಳು, ಕಾರುಗಳು ಮತ್ತು ವಿದ್ಯುತ್ ಮೀಟರ್ ಗಳಲ್ಲಿ ಬಳಸುವ ಸಿಮ್ ಗಳಿಗೆ ನೀಡುವ ನಂಬರ್ ಗಳಾಗಿವೆ. 
ಸದ್ಯ ಗ್ರಾಹಕರು ಬಳಸುತ್ತಿರುವ ಮೊಬೈಲ್ ಸಂಖ್ಯೆಗಳು ಹಾಗೇ ಉಳಿಯಲಿವೆ ಎಂದು ಟೆಲಿಕಾಂ ಸಂಸ್ಥೆಗಳಾದ ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ ಮತ್ತು ಟೆಲಿಕಾಂ ಉದ್ಯಮಗಳ ಒಕ್ಕೂಟ(ಸಿಓಎಐ) ಸ್ಪಷ್ಟಪಡಿಸಿವೆ. 
ಈಗಿರುವ ಎಂ2ಎಂ ಮೆಷಿನ್ ಗಳ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆಎಂದು ಡಿಓಟಿ ಹೇಳಿದೆ. 2018ರ ಜುಲೈ 1ರಿಂದ ವಿತರಿಸಲಾಗುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಡಿಓಟಿ ಸ್ಪಷ್ಟಪಡಿಸಿದೆ.
SCROLL FOR NEXT