ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಸು ಪ್ರಕಾಶ್ ಮೇಲೆ ಎ ಎಪಿ ಶಾಸಕ ಅಮಾನತುಲ್ಲಾ ಖಾನ್ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶಾಸಕರನ್ನು ಬಂಧಿಸಲಾಗಿದೆ. ಖಾನ್ ಅವರು ತಾನು ಜಾಮಿಯಾ ನಗರ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದು ಅವರನ್ನು ಪೋಲೀಸರು ಬಂಧಿಸಿದ್ದಾರೆ. ಈ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಶಾಸಕ ಖಾನ್ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪೋಲೀಸರು ಹಲ್ಲೆ ಪ್ರಕರಣ ಸಂಬಂಧ ಎ ಎಪಿ ಶಾಸಕ ಪ್ರಕಾಶ್ ಜನ್ವಾಲ್ ಅವರನ್ನು ಬಂಧಿಸಿದ್ದರು.
ಇದಕ್ಕೂ ಮುನ್ನ ಹಲ್ಲೆ ಪ್ರಕರಣ ಸಂಬಂಧ ನ್ಯಾಯಾಂಗ ಹಸ್ತಕ್ಷೇಪಕ್ಕೆ ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.
ಏತನ್ಮಧ್ಯೆ ಕಾಂಗ್ರೆಸ್ ಮುಖಂಡರ ನಿಯೋಗವು ದೆಹಲಿ ಲೆ. ಗವರ್ನರ್ ಅನಿಲ್ ಬೈಜಾಯ್ ಅವರನ್ನು ಭೇಟಿಯಾಗಿ ಹಲ್ಲೆ ಪ್ರಕರಣದ ಕುರಿತು ಚರ್ಚಿಸಿದೆ. ಅಲ್ಲದೆ ಹಲ್ಲೆ ನಡೆದ ಒಂದು ದಿನದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಸಂಬಂಧ ಪ್ರತಿಕ್ರಯಿಸಿದ್ದಾರೆ.
ಮಂಗಳವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಎ ಎಪಿ ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದರೆಂದು ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಸು ಪ್ರಕಾಶ್ ಪೋಲೀಸರಿಗೆ ದೂರು ಸಲ್ಲಿಸಿದ್ದರು.