ದೇಶ

ಐಎಎಫ್ ಸ್ಟೇಷನ್ ಹೊರಭಾಗದಲ್ಲಿ ಭಯೋತ್ಪಾದಕರ ದಾಳಿ ಯತ್ನ ವಿಫಲಗೊಳಿಸಿದ ಸೇನೆ

Srinivas Rao BV
ಶ್ರೀನಗರ: ಸತತ ಮೂರನೇ ದಿನವೂ ಸಹ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯತ್ನಿಸಿದ್ದು, ಫೆ.20 ರಂದು ಪುಲ್ವಾಮದಲ್ಲಿ ಭಾರತೀಯ ವಾಯುಪಡೆ ಠಾಣೆಯ ಹೊರಭಾಗದಲ್ಲಿ ನಡೆಸಿದ ದಾಳಿಯ ಯತ್ನ ವಿಫಲವಾಗಿದೆ. 
ರಕ್ಷಣಾ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, ಭಯೋತ್ಪಾದಕರು ದಾಳಿ ನಡೆಸಲು ಯತ್ನಿಸುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಭಾರತೀಯ ಸೇನೆ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. 
ಇಬ್ಬರಿಂದ ಮೂವರು ಭಯೋತ್ಪಾದಕರಿದ್ದ ತಂಡ ಗ್ರೆನೇಡ್ ದಾಳಿ ನಡೆಸಲು ಯತ್ನಿಸಿತ್ತು, ಅಷ್ಟೇ ಅಲ್ಲದೇ ಗುಂಡಿನ ದಾಳಿ ನಡೆಸಲೂ ಮುಂದಾಗಿದ್ದರು. ಪ್ರಕರಣದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರಕ್ಷಣಾ ವಕ್ತಾರರು ಹೆಳಿದ್ದಾರೆ.
SCROLL FOR NEXT